ಉಳ್ಳಾಲ: ನೂರೇ ಅಜ್ಮೀರ್ ಮೂರನೇ ವಾರ್ಷಿಕ ಕಾರ್ಯಕ್ರಮ
ಉಳ್ಳಾಲ, ಜ.22: ನಮ್ಮ ಜೀವನದಲ್ಲಿ ಇಸ್ಲಾಂನ ನೈಜ್ಯ ಸಂದೇಶ, ಸಾರವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸೈಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಕರೆ ನೀಡಿದ್ದಾರೆ.
ನೂರೆ ಅಜ್ಮೀರ್ ಸ್ಪಿರಿಚುವಲ್ ಮಜ್ಲಿಸ್ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲ ಮಾಸ್ತಿಕಟ್ಟೆ ಸಮೀಪದ ಬೈಲ್ ನಲ್ಲಿ ರವಿವಾರ ರಾತ್ರಿ ಆಯೋಜಿಸಿದ್ದ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ನೇತೃತ್ವದ 'ನೂರೇ ಅಜ್ಮೀರ್' ಮೂರನೇ ವಾರ್ಷಿಕ ಆಧ್ಯಾತ್ಮಿಕ ಮಹಾ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ವಲಿಯುದ್ದೀನ್ ಫೈಝಿ ಮಾತನಾಡಿದರು.
ಸೈಯದ್ ಸಫ್ವಾನ್ ತಂಙಳ್, ಕರೀಂ ದಾರಿಮಿ, ಮಜೀದ್ ದಾರಿಮಿ, ಎಸ್ ಬಿ.ದಾರಿಮಿ, ಉಳ್ಳಾಲ ದರ್ಗಾ ಸಮಿತಿಯ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಫಾರೂಕ್ ಉಳ್ಳಾಲ್, ಹೈದರ್ ಪರ್ತಿಪ್ಪಾಡಿ ಮಾತನಾಡಿ ಶುಭ ಹಾರೈಸಿದರು.
ಮುಸ್ತಫ ಅಬ್ದುಲ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ಉಸ್ಮಾನ್ ಫೈಝಿ ತೋಡಾರ್, ಹುಸೈನ್ ದಾರಿಮಿ, ಹನೀಫ್ ಹಾಜಿ ಮುಕ್ಕಚ್ಚೇರಿ, ತ್ವಾಹಾ ಹಾಜಿ, ಲತೀಫ್ ಅಡ್ಡೂರು, ಮಜೀದ್ ಸಿತಾರ್, ಫಕೀರಬ್ಬ ಮಾಸ್ಟರ್ ,ಇರ್ಷಾದ್ ದಾರಿಮಿ ಮಿತ್ತಬೈಲ್, ಆಸಿಫ್ ಅಬ್ದುಲ್ಲಾ, ಇಬ್ರಾಹೀಂ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.
ಇಕ್ಬಾಲ್ ಬಾಳಿಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.