ತೋಡಾರ್: ಅಲ್ ಬಿರ್ರ್ ಶಾಲೆಗಳ ಜಿಲ್ಲಾ ಮಟ್ಟದ 'ಕಿಡ್ಸ್ ಫೆಸ್ಟ್'
ಮೂಡುಬಿದಿರೆ, ಜ.24: ಅಲ್ ಬಿರ್ರ್ ಶಾಲೆಗಳ ದ.ಕ. ಜಿಲ್ಲಾ ಮಟ್ಟದ 'ಕಿಡ್ಸ್ ಫೆಸ್ಟ್' ಸಮಾರಂಭವು ತೋಡಾರಿನ ಆದರ್ಶ್ ಕಾಲೇಜು ಆವರಣದಲ್ಲಿ ಮಂಗಳವಾರ ನಡೆಯಿತು.
ಸಮಸ್ತ ಮುಶಾವರ ಸದಸ್ಯ ಶೈಖುನಾ ಉಸ್ಮಾನುಲ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಸ್ವಾಗತ ಸಮಿತಿಯ ಅಧ್ಯಕ್ಷ ಡಿ.ಎ.ಉಸ್ಮಾನ್ ಹಾಜಿ ಏರ್ ಇಂಡಿಯಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈಯದ್ ಅಕ್ರಮ್ ಆಲಿ ತಂಙಳ್ ರಹ್ಮಾನಿ ದುಆಶೀರ್ವಚನ ನೀಡಿದರು. ಆದರ್ಶ್ ಕಾಲೇಜಿನ ನಿರ್ದೇಶಕ ಮುಹಮ್ಮದ್ ಆಸಿಫ್ ಧ್ವಜಾರೋಹಣ ನೆರವೇರಿಸಿದರು.
ಅಲ್ ಬಿರ್ರ್ ಕೇಂದ್ರೀಯ ಸಮಿತಿಯ ಆಡಳಿತ ಮಂಡಳಿಯ ನಿರ್ದೇಶಕ ಕೆ.ಪಿ.ಮುಹಮ್ಮದ್ ಮುಖ್ಯ ಭಾಷಣ ಹಾಗೂ ಕರ್ನಾಟಕ ರಾಜ್ಯ ಅಲ್ ಬಿರ್ರ್ ಸಂಚಾಲಕ ಅಬ್ದುಲ್ ಶುಕೂರ್ ದಾರಿಮಿ ಕರಾಯ ದಿಕ್ಸೂಚಿ ಭಾಷಣ ಮಾಡಿದರು.
ಸೈಯದ್ ಜುನೈದ್ ಜಿಫ್ರಿ ತಂಙಳ್ ಆತೂರು, ಆಸಿಫ್ ಪರಂಪಲ್ಲಿ, ಎಂ.ಎಚ್.ಮುಹಿಯುದ್ದೀನ್ ಹಾಜಿ ಅಡ್ಡೂರು, ಉದ್ಯಮಿ ಅಬ್ದುಲ್ ಲತೀಫ್ ಗುರುಪುರ, ರಶೀದ್ ಹಾಜಿ ಪರ್ಲಡ್ಕ, ಎಂ.ಜಿ.ಮುಹಮ್ಮದ್ ಹಾಜಿ, ಇಸಾಕ್ ಹಾಜಿ, ಅಬ್ದುಲ್ ಖಾದರ್ ಹಾಜಿ ಮದರ್ ಇಂಡಿಯಾ, ಉಸ್ಮಾನ್ ಸೂರಿಂಜೆ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ರಶೀದ್ ಹಾಜಿ ಪರ್ಲಡ್ಕ, ಸಲೀಮ್ ಹಂಡೇಲ್, ಅಝೀಝ್ ಮಾಲಿಕ್, ಅಶ್ರಫ್ ಗುತ್ತು, ಇಲ್ಯಾಸ್ ಎಸ್.ಎಂ., ಅಲ್ತಾಫ್ ಲೊರೆಟ್ಟೊಪದವು, ಅಬ್ದುಲ್ ಖಾದರ್ ಅಡ್ಡೂರು, ಶಾಫಿ ಮೂಡುಬಿದಿರೆ, ಅಶ್ರಫ್ ಮರೋಡಿ, ಆಸಿಫ್ ಕುನ್ನಿಲ್, ಸಂಶುದ್ದೀನ್ ಹನೀಫಿ, ಜಾಬಿರ್ ಫೈಝಿ ಬನಾರಿ, ಜಬ್ಬಾರ್ ಅಸ್ಲಮಿ ಕರಾಯ, ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ಆಸಿಫ್ ಕುನ್ನಿಲ್, ಅಫ್ಹಾಮ್ ತಂಙಳ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಕನ್ವೀನರ್ ಅಬ್ದುಲ್ ಸಲಾಮ್ ಬೂಟ್ ಬಝಾರ್ ಸ್ವಾಗತಿಸಿದರು. ಆರಿಫ್ ಕಮ್ಮಾಜೆ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ದ.ಕ ಹಾಗೂ ಕೊಡಗು ಜಿಲ್ಲೆಯ 15 ಶಾಲೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ನಾಲ್ಕು ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆದವು..
ಸ್ಪರ್ಧಾ ಫಲಿತಾಂಶ:
ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಬದ್ರಿಯಾ ಅಲ್ ಬಿರ್ರ್, ಅಡ್ಡೂರು ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಆದರ್ಶ್ ಅಲ್ ಬಿರ್ರ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ಪ್ರಾಥಮಿಕ ವಿಭಾಗದಲ್ಲಿ ಮೂಡುಬಿದಿರೆ ಜಬ್ಬಾರ್ ಉಸ್ತಾದ್ ಮೆಮೋರಿಯಲ್ ಅಲ್ ಬಿರ್ರ್ ಚಾಂಪಿಯನ್ ಆದರೆ, ಕೈಕಂಬ ಸಬಿಲ್ ಉಲ್ ಹುದಾ ಅಲ್ ಬಿರ್ರ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ಸ್ಪೋರ್ಟ್ಸ್ ವಿಭಾಗದಲ್ಲಿ ಆದರ್ಶ್ ಅಲ್ ಬಿರ್ರ್ ಮತ್ತು ಮೂಡುಬಿದಿರೆ ಅಲ್ ಬಿರ್ರ್ ಪ್ರಶಸ್ತಿ ಪಡೆದುಕೊಂಡರೆ ಸಯನ್ಸ್ ವಿಭಾಗದಲ್ಲಿ ಕೈಕಂಬ ಅಲ್ ಬಿರ್ರ್ ಚಾಂಪಿಯನ್ ಆಗಿದೆ.