ಫಾಝಿಲ್ ಮಂಗಳಪೇಟೆ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ನ ನೂತನ ಕಚೇರಿ ಉದ್ಘಾಟನೆ
ಸುರತ್ಕಲ್: ಹಿಂದುತ್ವ ಗೂಂಡಾಗಳ ದಾಳಿಗೆ ಬಲಿಯಾಗಿದ್ದ ಫಾಝಿಲ್ ಮಂಗಳಪೇಟೆ ಅವರ ನೆನಪಿನಲ್ಲಿ ರೂಪಿಸಲಾದ ಫಾಝಿಲ್ ಮಂಗಳಪೇಟೆ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ನ ನೂತನ ಕಚೇರಿ ಉದ್ಘಾಟನಾ ಸಮಾರಂಭವು ರವಿವಾರ ಮಂಗಳಪೇಟೆಯಲ್ಲಿ ಜರುಗಿತು.
ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಭಾಧ್ಯಕ್ಷ ಯು.ಟಿ. ಖಾದರ್, ಫಾಝಿಲ್ ಹೆಸರಿನಲ್ಲಿ ಟ್ರಸ್ಟ್ ಮಾಡುವ ಮುಲಕ ಬಡವರು ಅಶಕ್ತರಿಗೆ ಆಶಾಕಿರಣವಾಗಿ ಮೂಡಿಬರುತ್ತಿದರುವ ಫಾಝಿಲ್ ಮಂಗಳಪೇಟೆ ಮೆಮೊರಿ ಯಲ್ ಚಾರಿಟೇಬಲ್ ಟ್ರಸ್ಟ್ ಅವರ ಕೊಲೆ ಆರೋಪಿಗಳು ಮತ್ತು ಅದಕ್ಕೆ ಪ್ರೋತ್ಸಾಹ ನೀಡಿದವರ ಎದೆಗೆ ಕಾಲಾನುಕಾಲ ಚುಚ್ಚುವಂತೆ ಮಾಡುವ ಕೆಲಸ ಮಾಡಿದೆ. ಅಪರಾಧಿಗಳಿಗೆ ಇದಕ್ಕಿಂತ ದೊಡ್ಡ ಶೀಕ್ಷೆ ಬೇರೆ ಬೇಕಿಲ್ಲ ಎಂದರು.
ಯುವಕರು ಸೌಹಾರ್ದದ ರಾಯಭಾರಿಗಳಾಗಬೇಕು. ಹಿರಿಯರು, ಧರ್ಮಗುರುಗಳ ಮಾರ್ಗದರಶನ ಪಡದುಕೊಂಡು ಮುನ್ನಡೆದರೆ ಯುವ ಸಮುದಾಯ ಗುರಿಮುಟ್ಟಲು ಸಾಧ್ಯ. ಹೊರತು ಗಿರಿ ಇಲ್ಲದವರ ಹಿಂದೆ ಸಾಗಿದರೆ ಆಗದು ಎಂದರು. ಸೌಹಾರ್‍ದದೊಂದಿಗೆ ಟ್ರಸ್ಟ್ ಇತಿಹಾಸ ನಿರ್‍ಮಿಸುವಂತಾಗಲಿ, ಜಿಲ್ಲೆ ರಾಜ್ಯ , ರಾಷ್ಟ್ರ ಮಟ್ಟದಲ್ಲೂ ಟ್ರಸ್ಟ್ ಬೆಳೆಯಲಿ ಎಂದು ಯುಟಿ ಖಾದರ್ ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಫಾಝಿಲ್ ಮಂಗಳಪೇಟೆ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಮರ್ಹೂಮ್ ಫಾಝಿಲ್ ಮಂಗಳಪೇಟೆ ಅವರ ತಂದೆ ಉಮರ್ ಫಾರೂಕ್ ವಹಿಸಿದ್ದರು. ಮಂಗಳಪೇಟೆ ಜುಮಾ ಮಸೀದಿಯ ಮಾಜಿ ಖತೀಬ್ ಅಲಿ ಮದನಿ ಉಸ್ತಾದ್ ಚಾಲನೆ ನೀಡಿದರು.
ಇದೇ ಸಂದರ್ಭ ಇಬ್ಬರು ಅಸಕ್ತರಿಗೆ ಟ್ರಸ್ಟ್ ನ ವತಿಯಿಂದ ತಲಾ 25 ಸಾವಿರ ರೂ. ಸಹಾಯಧನವನ್ನು ಯು.ಟಿ. ಖಾದರ್ ಅವರು ಹಸ್ತಾಂತರಿಸಿದರು.
ಸಮಾರಂಭದಲ್ಲಿ ದ.ಕ. ಜಿಲ್ಲಾ ವಕ್ಪ್ ಬೋರ್ಡ್ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಮನಪಾ ಮಾಜಿ ಮೇಯರ್ ಅಶ್ರಫ್ ಮೇಯರ್, ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಮುಮ್ತಾಝ್ ಅಲಿ, ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ದ.ಕ. ಜಿಲ್ಲಾ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಸಾಹುಲ್ ಹಮೀದ್ ಕೆ.ಕೆ., ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಶಮೀರ್ ಕಾಟಿಪಳ್ಳ, ಕರ್ನಾಟಕ ಸರಕಾರ ವಕ್ಫ್ ಕೌನ್ಸಿಲ್ ಮಾಜಿ ಸದಸ್ಯ ಹಾಜಿ ಎಂ.ಎ. ಹಸನಬ್ಬ, ಫಾಝಿಲ್ ಮಂಗಳಪೇಟೆ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಖಾದರ್ ಕಾನ, ಉಪಾಧ್ಯಕ್ಷ ಅಬ್ದುಲ್ ಹಮೀದ್ ಕಾನ, ಬಾಳ ಗ್ರಾ.ಪಂ. ಸದಸ್ಯ ಎಂ. ಸರ್ಫರಾಝ್ ನವಾಝ್, ಎಸ್ ಡಿಪಿಐ ಸುರತ್ಕಲ್ ಬ್ಲಾಕ್ ಅಧ್ಯಕ್ಷ ಸಲಾಂ ಕಾನ, ಮಂಗಳೂರು ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಅಶ್ರಫ್ ಬದ್ರಿಯಾ, ಎಸ್ ಡಿಪಿಐ ಉತ್ತರ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಉಸ್ಮಾನ್ ಗುರುಪುರ, ಶರೀಫ್ ಮುಂಚೂರು, ಎಸ್ ಡಿಟಿಯು ಅಧ್ಯಕ್ಷ ಫಯಾಝ್ ಮೊದಲಾದವರು ಉಪಸ್ಥಿತರಿದ್ದರು.