ಉಳ್ಳಾಲದ ಮೊಗವೀರ ಬಾಲಕಿಯ ಸಾಧನೆ: ನ್ಯೂಯಾರ್ಕ್ ವಲ್ಡ್ ಸೈನ್ಸ್ ಸ್ಕಾಲರ್ ಕಾರ್ಯಕ್ರಮಕ್ಕೆ ಆಹ್ವಾನ
ಉಳ್ಳಾಲ: 2024ರ ಮೇ, ತಿಂಗಳಲ್ಲಿ ಅಮರಿಕಾದ ನ್ಯೂಯಾರ್ಕ್ನಲ್ಲಿ ಜರಗುವ ವಲ್ಡ್ ಸೈನ್ಸ್ ಸ್ಕಾಲರ್ ಕಾರ್ಯಕ್ರಮಕ್ಕೆ ಉಳ್ಳಾಲದ ಮೊಗವೀರ ಸಮಾಜದ ಬಾಲಕಿ ಸಿಂಧೂರ (15)ಳಿಗೆ ಆಹ್ವಾನ ಬಂದಿದ್ದು, ಮುಂದಿನ ತಿಂಗಳು ತಾಯಿ ಮಗಳು ಇಬ್ಬರು ಭಾಗಿಯಾಗಲಿದ್ದಾರೆ ಎಂದು ಬಾಲಕಿಯ ತಾಯಿ ಶಿಬಾನಿ ರಾಜಾ ಹೇಳಿದರು.
ತೊಕ್ಕೊಟ್ಟು ಸೇವಾಸೌಧದಲ್ಲಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಇಂದು ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ನ್ಯೂಯಾರ್ಕ್ ನಲ್ಲಿ ನಡೆಯುವ ವರ್ಲ್ಡ್ ಸೈನ್ಸ್ ಸ್ಕಾಲರ್ ಅನ್ನುವ ಕಾರ್ಯಕ್ರಮಕ್ಕೆ ಹಾಜರಾಗಲು ಹಲವು ಪ್ರಬಂಧ ಮಂಡಿಸಲು ಹೇಳಿದ್ದರು. ಆ ಪ್ರಬಂಧಗಳ ಆಧಾರದಂತೆ ಸಂದರ್ಶನ ನಡೆಸುತ್ತಾರೆ. ಆನಂತರ ಮತ್ತೆ ವಿಜ್ಞಾನ , ಗಣಿತ ವಿಷಯಗಳ ಪ್ರಬಂಧ ಮಂಡಿಸಿದ ನಂತರ ವಲ್ಡ್ ð ಸೈನ್ಸ್ ಸ್ಕಾಲರ್ ಆಗಿ ಆಯ್ಕೆಯಾಗಿ, ಕಾರ್ಯಕ್ರಮದಲ್ಲಿ ಭಾಗವಹಿ ಸಲು ಆಹ್ವಾನ ಬಂದಿದೆ . ಕಾರ್ಯಕ್ರಮಕ್ಕೆ 22 ದೇಶಗಳಿಂದ 55 ವಿದ್ಯಾರ್ಥಿಗಳನ್ನು ಆಯ್ಕೆಮಾಡಿದ್ದು, ಅದರಲ್ಲಿ ಸಿಂಧೂರ ಸಹ ಒಬ್ಬರಾಗಿದ್ದಾಳೆ. ಉಳ್ಳಾಲದ ಮೊಗವೀರ ಮುಖಂಡ ಬಾಬು ಬಂಗೇರ ಹಾಗೂ ಶಶಿಕಾಂತಿ ಅವರ ಮೊಮ್ಮಗಳಾಗಿ ರುವ ಸಿಂಧೂರ ಬೆಂಗಳೂರಿನ ನ್ಯೂ ಅರೈಸಿಂಗ್ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ. ಇಳಿ ವಯಸ್ಸಿನಿಂದಲೇ ಟಿ.ವಿ ನೋಡುವುದು ಕಡಿಮೆ, ಚಿತ್ರಕಲೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಾಕೆ. ಸ್ಮರಣಶಕ್ತಿ ಜಾಸ್ತಿಯಿತ್ತು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಚಾರದ ಕುರಿತು ಆಸಕ್ತಿ ಹೊಂದಿದ್ದ ಸಿಂಧೂರ ಕೊರೊನಾ ಸಂದರ್ಭ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳ , ಶಿಕ್ಷಕರ ಮೂಲಕ ಶಿಕ್ಷಣ ಪಡೆಯುತ್ತಾ ಹೋದಂತೆ ಆಸಕ್ತಿ ಇನ್ನಷ್ಟು ಹೆಚ್ಚಾಗಿಸಿದ್ದಳು. ಮಾನವ ಜನಾಂಗಕ್ಕೆ ಉಪಯುಕ್ತವಾಗುವ ವಿಜ್ಞಾನ ಸಂಶೋಧನೆ ಪ್ರಾಜೆಕ್ಟ್ ವರದಿಯನ್ನು ಸಲ್ಲಿಸಿದ್ದ ಈಕೆ ಸದ್ಯ ವೈದ್ಯಕೀಯ ಜಗತ್ತಿನಲ್ಲಿ ದೇಹದಲ್ಲಿರುವ ಗೆಡ್ಡೆಗಳು ಯಾವುದು ಅನ್ನುವುದು ಪತ್ತೆಹಚ್ಚುವುದರ ಒಳಗೆ ಬೇರೆ ಹಂತ ವನ್ನು ದಾಟಿರುತ್ತೇವೆ. ಅದಕ್ಕಾಗಿ ಸಾಧ್ಯವಾದಷ್ಟು ಬೇಗ ಪತ್ತೆಹಚ್ಚಿದಲ್ಲಿ ರೋಗಿ ಗುಣಮುಖರಾಗುವ ಸಾಧ್ಯತೆಗಳು ತುಂಬಾ ಜಾಸ್ತಿಯಿರುವುದು. ಈ ನಿಟ್ಟಿನಲ್ಲಿ ರೇಡಿಯಾ ಅನ್ನುವ ಪ್ರಾಜೆಕ್ಟ್ ಸಂಶೋಧಿಸುವ ಮೂಲಕ ಗೆಡ್ಡೆಯ ಕುರಿತು ಶೀಘ್ರ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಪುರಸ್ಕಾರ ದೊರೆತಿದೆ.
ಮೆದುಳಿಗೆ ರಕ್ತಪ್ರವಾಹದ ಕೊರತೆಯಿಂದ ಅಲ್ಝೆಮರ್ ಕಾಯಿಲೆಗೆ ವಯಸ್ಕರು ತುತ್ತಾಗುತ್ತಾರೆ. ಅದಕ್ಕಾಗಿ ಏಐ ಮಾಡೆಲ್ ಸಿದ್ಧಗೊಳಿಸಿರುವ ಸಿಂಧೂರ, ಮನುಷ್ಯನಿಗೆ ಎಷ್ಟು ಪ್ರಾಯದಲ್ಲಿ ಡಿಮೆನ್ಷಿಯಾ ಬರುವ ಸಾಧ್ಯತೆಗಳಿವೆ , ಬರುವುದೋ ಇಲ್ಲವೋ? ಅದನ್ನು ತಡೆಹಿಡಿಯಲು, ನಿಯಂತ್ರಿಸಲು ವ್ಯಾಯಾಮಗಳನ್ನು ನಡೆಸಬಹುದು ಅನ್ನುವ ವಾಸ್ತವವನ್ನು ಹೇಳುವ ಸಂಶೋಧನೆಗೆ ಯುರೋಪ್ ನ ಪ್ರೇಗ್ ನಿಂದ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಪೀಪಲ್ಸ್ ಚಾಯ್ಸ್ ಪುರಸ್ಕಾರ, ವಯಸ್ಕರಿಗೆ ಕೈಗಳು ನಡುಗಿದರೂ, ತಿನ್ನುವ ಸಂದರ್ಭ ಚಮಚ ಅಲುಗಾಡದಂತೆ ಉಳಿಸುವ ರಿಸ್ಟ್ ಬ್ಯಾಂಡ್ ಸಾಧನ ವನ್ನು ಸಿದ್ಧಪಡಿಸಿದ ಸಿಂಧೂರ ಸಾಧನೆಗೆ ದೆಹಲಿಯಿಂದ ರಾಷ್ಟ್ರಮಟ್ಟದ ರಿಸ್ಟ್ ಬ್ಯಾಂಡ್ ಪುರಸ್ಕಾರ ದೊರೆತಿದ್ದು, + ಎ.೬ ರಂದು ದೆಹಲಿಗೆ ಭೇಟಿ ನೀಡಿ ದ್ವಿತೀಯ ಸುತ್ತಿನಲ್ಲಿ ಭಾಗಿಯಾಗಲಿದ್ದೇವೆ ಎಂದರು.
ವಿದ್ಯಾರ್ಥಿನಿ ಸಿಂಧೂರ ಮಾತನಾಡಿ, ಹಿರಿಯರ ಹಾಗೂ ಹೆತ್ತವರ ಮಾರ್ಗದರ್ಶನದಿಂದ ಯಶಸ್ಸು ಸಾಧ್ಯವಾಗಿದೆ. ಕೊರೊನಾ ಸಂದರ್ಭ ಡಯಾಗ್ನಾಸ್ ಆಗುವ ಬಗೆ, ಚಿಕಿತ್ಸೆ , ಎಕ್ಯುರೇಟ್ ಡಯಾಗ್ನಾಸಿಸ್ ಆಗ್ತಾ ಇಲ್ಲ ಅನ್ನುವುದು ಬೇಸರ ತಂದಿತ್ತು. ಈ ಕುರಿತು ಆಳವಾಗಿ ಅಧ್ಯಯನ ನಡೆಸಿದ ಹಿನ್ನೆಲೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಚಾರ ತಿಳಿದು ಯಶಸ್ಸು ಸಾಧ್ಯವಾಗಿದೆ, ಭವಿಷ್ಯದಲ್ಲಿಯೂ ವಿಜ್ಞಾನಿಯಾಗುವ ಕನಸು ಹೊಂದಿದ್ದು, ಹುಟ್ಟಿ ಬೆಳದ ಉಳ್ಳಾಲವನ್ನು ಮರೆ ಯದೇ ದೇಶದ ತಾಂತ್ರಿಕತೆ ಹಾಗೂ ವೈಜ್ಞಾನಿಕತೆಯ ಬಹುತೇಕ ಸವಾಲುಗಳಿಗೆ ಉತ್ತರವಾಗಲು ಪ್ರಯತ್ನಿಸುವೆನು ಎಂದರು.
ಈ ಸಂದರ್ಭ ತಂದೆ ರಾಜಾ ದಯಾಳನ್, ಬಾಬು ಬಂಗೇರ, ಶಶಿಕಾಂತಿ ಉಳ್ಳಾಲ್ ಉಪಸ್ಥಿತರಿದ್ದರು.