ಯುವತಿ ನಾಪತ್ತೆ
ಮಂಗಳೂರು : ನಗರ ಹೊರವಲಯದ ಕಸಬಾ ಬೆಂಗರೆಯ ಹಲೀಮಾಬಿ (19)ಎಂಬಾಕೆ ಬುಧವಾರದಿಂದ ತನ್ನ ಮನೆ ಯಿಂದ ನಾಪತ್ತೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 ಅಡಿ ಎತ್ತರದ, ಬಿಳಿ ಮೈ ಬಣ್ಣದ, ತೆಳ್ಳಗಿನ ಶರೀರದ ಈಕೆಯ ಹಣೆಯ ಎಡಭಾಗದಲ್ಲಿ ಎರಡು ಕಪ್ಪುಮಚ್ಚೆಗಳು ಇದೆ. ಮನೆಯಿಂದ ಹೋಗುವಾಗ ಹಸಿರು ಟಿ ಶರ್ಟ್, ಕಪ್ಪುಪ್ಯಾಂಟ್, ಕಪ್ಪುಬುರ್ಖಾ ಧರಿಸಿರುತ್ತಾಳೆ. ಕನ್ನಡ, ಬ್ಯಾರಿ ಬಾಷೆ ಮಾತನಾಡುತ್ತಾಳೆ.
ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಪಣಂಬೂರು ಪೊಲೀಸ್ ನಿರೀಕ್ಷಕರ (ಮೊ.ಸಂ: 9480805331) ಅಥವಾ ಪಣಂಬೂರು ಪೊಲೀಸ್ ಠಾಣೆಯ (ದೂ.ಸಂ: 0824-2220530) ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ (ದೂ.ಸಂ: 0824-2220800)ನ್ನು ಸಂಪರ್ಕಿಸಬಹುದು ಎಂದು ಪಣಂಬೂರು ಪೊಲೀಸ್ ಠಾಣೆಯ ಪ್ರಕಟನೆ ತಿಳಿಸಿದೆ.
Next Story