ಕಲ್ಲಾಪು: ಪ್ರವಾದಿ ಸಂದೇಶ ಅಭಿಯಾನ ಪ್ರಯುಕ್ತ ವಿಚಾರ ವಿನಿಮಯ ಕಾರ್ಯಕ್ರಮ
ಉಳ್ಳಾಲ: ದೇವರು ಪ್ರೀತಿಯ ಸ್ವರೂಪಿ. ಎಲ್ಲಾ ಧರ್ಮಗಳು ಪ್ರೀತಿಗೆ ಒತ್ತು ಕೊಡುತ್ತದೆ. ನಾವು ಜಾತಿ, ಧರ್ಮ ನೋಡದೆ ಪ್ರೀತಿಯಿಂದ ಬದುಕಬೇಕಾಗಿದೆ ಎಂದು ಪೆರ್ಮನ್ನೂರು ಚರ್ಚ್ ಸಹಾಯಕ ಧರ್ಮಗುರು ಫಾ.ಜಾನ್ಸನ್ ಕರೆ ನೀಡಿದ್ದಾರೆ.
ಅವರು ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಇದರ ಆಶ್ರಯದಲ್ಲಿ ಪ್ರವಾದಿ ಸಂದೇಶ ಅಭಿಯಾನ ಪ್ರಯುಕ್ತ 'ಆದರ್ಶ ಸಮಾಜದ ನಿರ್ಮಾಣ ಪ್ರವಾದಿ ಮುಹಮ್ಮದ್ (ಸ) ರ ಶಿಕ್ಷಣ ಬೆಳಕಿನಲ್ಲಿ' ಎಂಬ ವಿಚಾರದ ಬಗ್ಗೆ ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಚಾರ ವಿನಿಮಯ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ವಿಚಾರ ಮಂಡಿಸಿ ಮಾತನಾಡಿದ ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಪ್ರೊ.ಡಾ.ಮುಹಮ್ಮದ್ ಮುಬೀನ್, ಆರನೇ ಶತಮಾನದಲ್ಲಿ ಜನಿಸಿದ ಪ್ರವಾದಿ ಮುಹಮ್ಮದ್(ಸ.) ಇಂದಿಗೂ ಪ್ರಸಕ್ತರಾಗಿದ್ದಾರೆ. ಸಮಗ್ರವಾದ ಶಿಕ್ಷಣ ನೀಡಿದ ಅವರ ಮಾರ್ಗದರ್ಶನ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ.ಅವರ ಸಂದೇಶ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಅಧ್ಯಕ್ಷ ಮುಹಮ್ಮದ್ ಇಸ್ಲಾಕ್ ಪುತ್ತೂರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು
ಪೊಸ ಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ನವೀನ್ ನಾಯಕ್, ಯಾಕೂಬ್ ಕಲ್ಲಾಪು ಅನಿಸಿಕೆ ವ್ಯಕ್ತಪಡಿಸಿದರು.
ಜಮಾಅತೇ ಇಸ್ಲಾಮಿ ಹಿಂದ್ ಉಳ್ಳಾಲ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ ಉಪಸ್ಥಿತರಿದ್ದರು.
ಮುಹಮ್ಮದ್ ಮುಝಮ್ಮಿಲ್ ಸ್ವಾಗತಿಸಿದರು. ಅಬ್ದುಲ್ ರವೂಫ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.