ಉಳ್ಳಾಲ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮ
ಉಳ್ಳಾಲ: ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮವು ಅಧ್ಯಕ್ಷ ರಮೇಶ್ ಬೋಳಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಪ್ರಯುಕ್ತ ತೊಕ್ಕೊಟ್ಟು ಬಸ್ ತಂಗುದಾಣ ದಿಂದ ಸಭಾಂಗಣದ ವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹಾಗೂ ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಸಭಾಂಗಣದಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಲಾಯಿತು.
ಈ ಸಂದರ್ಭ ವಿವಿಧ ಸಂಘಟನೆಗಳಲ್ಲಿ ಗುರುತಿಸಿ ಕೊಂಡಿರುವ ಕಾಂಗ್ರೆಸ್ ನಾಯಕರಾದ ಮಹಮ್ಮದ್ ಮೌನೇಶ್, ಇಕ್ಬಾಲ್ ಸಾಮಾನಿಗೆ , ವೈದ್ಯಕೀಯ ವಿದ್ಯಾರ್ಥಿನಿ ಕುಮಾರಿ ತನ್ವೀ , ಸಾಹಿಲ್ ಮಂಚಿಲ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಪೂಜಾರಿ, ವಕ್ಫ್ ಬೋರ್ಡ್ ರಾಜ್ಯ ಸದಸ್ಯ ರಝಿಯಾ ಇಬ್ರಾಹಿಂ,ಹರ್ಷರಾಜ್ ಮುದ್ಯ, ದೀಪಕ್ ಪಿಲಾರ್, ಪುರುಷೋತ್ತಮ ಪಿಲಾರ್, ಸುರೇಖಾ ಚಂದ್ರ ಹಾಸ್, ಮೊಹಮ್ಮದ್ ಮೋನು, ದಿನೇಶ್ ರೈ, ಶಕುಂತಲಾ ಶೆಟ್ಟಿ, ಮನ್ಸೂರ್, ಅಬೂಸಾಲಿ ಕಿನ್ಯ, ಮೌಸೀರ್ ಸಾಮಣಿಗೆ, ಸೈಫುಲ್ಲಾ ಸೋಮೇಶ್ವರ, ಸಾದಿಕ್ ಕಲ್ಲಾಪು,ಚಂದ್ರಿಕಾ ರೈ, ರೂಪೇಶ್ ಭಟ್ನಗರ, ಸೇವಾದಳದ ಮಹಿಳಾ ಅಧ್ಯಕ್ಷೆ ಚಾಂದಿನಿ,ರಶೀದ್ ಉಳ್ಳಾಲ, ಮಜೀದ್ ಸಾತ್ಕೋ, ಎ.ಕೆ.ಅಬ್ದುಲ್ ರಹಿಮಾನ್ ಕೋಡಿಜಾಲ್, ಮೊಯ್ದಿನ್ ಬಾವಾ ಕೆಸಿರೋಡ್ ಮತ್ತಿತರರು ಉಪಸ್ಥಿತರಿದ್ದರು.