ಬ್ಯಾರಿ ಎಲ್ತ್ಗಾರ್ತಿಮಾರೊ ಕೂಟದಿಂದ ಭಾಷಾ ದಿನಾಚರಣೆ
ಮಂಗಳೂರು: ಬ್ಯಾರಿ ಎಲ್ತ್ಗಾರ್ತಿಮಾರೊ ಕೂಟದ ವತಿಯಿಂದ ಬ್ಯಾರಿ ಭಾಷಾ ದಿನವನ್ನು ವಾಟ್ಸಪ್ ಗ್ರೂಪಿನಲ್ಲಿ ಆನ್ಲೈನ್ ಮೂಲಕ ಗುರುವಾರ ಆಚರಿಸಲಾಯಿತು.
ಗ್ರೂಪಿನ ಸದಸ್ಯೆಯರಿಗಾಗಿ ಏರ್ಪಡಿಸಲಾದ ಅನುವಾದ ಸ್ಪರ್ಧೆಯನ್ನು ಗ್ರೂಪಿನ ಅಡ್ಮಿನ್ಸ್ಗಳಾದ ಆಯಿಷಾ ಯು.ಕೆ, ಹಫ್ಸಾ ಬಾನು ಬೆಂಗಳೂರು, ಝುಲೇಖಾ ಮಮ್ತಾಝ್, ಶಮೀಮಾ ಕುತ್ತಾರ್ ನಡೆಸಿಕೊಟ್ಟರು.
ವಿಜೇತರಿಗೆ ಬ್ಯಾರಿ ಎಲ್ತ್ಗಾರ್ತಿಮಾರೊ ಕೂಟದ ವತಿಯಿಂದ ನಡೆಸಲಾಗುವ ಮುಂದಿನ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದೆಂದು ಅಡ್ಮಿನ್ಸ್ಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story