ಸಂಸದೀಯ ಇಂಧನ ಸ್ಥಾಯಿ ಸಮಿತಿಗೆ ಸಂಸದ ಬ್ರಿಜೇಶ್ ಚೌಟ ನೇಮಕ
ಮಂಗಳೂರು, ಅ.6: ದ.ಕ. ಸಂಸದ ಬ್ರಿಜೇಶ್ ಚೌಟ ಸಂಸದೀಯ ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಈ ಸ್ಥಾಯಿ ಸಮಿತಿಯು ಕೇಂದ್ರ ಇಂಧನ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯದ ಮೇಲುಸ್ತುವಾರಿಗಳ ಬಗ್ಗೆ ಕಾರ್ಯನಿರ್ವಹಿಸಲಿದೆ. ಇದೀಗ ಈ ಸ್ಥಾಯಿ ಸಮಿತಿಗೆ ನೇಮಕಗೊಂಡಿರುವ ಬ್ರಿಜೇಶ್ ಚೌಟ ಇಂಧನ ಕ್ಷೇತ್ರಕ್ಕೆ ಸಂಬಂಧಿ ಸಿದ ಎಲ್ಲ ರೀತಿಯ ನೀತಿ-ನಿಯಮಗಳು, ಕಾರ್ಯಯೋಜನೆಗಳ ಬಗ್ಗೆ ಪುನರ್ ಪರಿಶೀಲಿಸುವ ಹಾಗೂ ನಿಗಾ ವಹಿಸುವಲ್ಲಿ ಪಾತ್ರವಹಿಸಲಿದ್ದಾರೆ.
ಈ ಸಮಿತಿಯ ಮೊದಲ ಸಭೆಯು ಅ.7ರಂದು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story