ರಾಷ್ಟ್ರೀಯ ಪವರ್ ಲಿಫ್ಟಿಂಗ್: ನಿಶಿತ್ ನಾಯ್ಕ್-ಆಯೂಷ್ ರೈಗೆ ದ್ವಿತೀಯ ಸ್ಥಾನ
ಮಂಗಳೂರು, ಅ.10: ಉತ್ತರ ಪ್ರದೇಶದ ಗಾಝಿಯಾಬಾದ್ನ ಸ್ವಸ್ತಿಕ್ ವಿದ್ಯಾಮಂದಿರದ ನೆಹರೂ ನಗರದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಅಂಡರ್ 17 ವರ್ಷದ ಬಾಲಕರ ಬಿಲೋ 81 ಕಿಲೋ ವಿಭಾಗದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೂಡುಶೆಡ್ಡೆಯ ಶಾರದಾ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ನಿಶಿತ್ ಕೆ. ನಾಯ್ಕ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈತ ಗಂಜಿಮಠದ ಕೇಶವ ನಾಯ್ಕ್ ಮತ್ತು ಪವಿತ್ರಾ ನಾಯ್ಕ್ ದಂಪತಿಯ ಪುತ್ರ.
ಅಂಡರ್ 17 ವರ್ಷದ ಬಾಲಕರ ಬಿಲೋ 73 ಕಿಲೋ ವಿಭಾಗದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೂಡುಶೆಡ್ಡೆಯ ಶಾರದಾ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ಆಯೂಷ್ ಎ. ರೈ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈತ ವಾಮಂಜೂರು ತಿರುವೈಲಿನ ಅಶೋಕ್ ರೈ ಮತ್ತು ಪ್ರತಿಮಾ ರೈ ದಂಪತಿಯ ಪುತ್ರ.
Next Story