ಕಡಲ ತೀರದಲ್ಲಿ ಅಣಕು ಕಾರ್ಯಾಚರಣೆ
ಮಂಗಳೂರು, ಅ.17: ಇಂಡಿಯನ್ ಕೋಸ್ಟ್ಗಾರ್ಡ್, ಕರಾವಳಿ ಕಾವಲು ಪೊಲೀಸ್, ಇಂಡಿಯನ್ ನೇವಿ, ಕಸ್ಟಮ್ಸ್, ಮೀನುಗಾರಿಕೆ ಇಲಾಖೆ, ಬಂದರು ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆಯ ಜಂಟಿ ಸಹಯೋಗದಲ್ಲಿ ಅ.16 ಮತ್ತು 17ರಂದು ಸತತ 36 ಗಂಟೆ ಕಾಲ ಸಾಗರ ಕವಚ ಅಣಕು ಕಾರ್ಯಾಚರಣೆ ನಡೆಯಿತು.
ಈ ಕಾರ್ಯಾಚರಣೆಯಲ್ಲಿ 25 ಕಡೆಗಳಲ್ಲಿ ವಿಧ್ವಂಸಕ ಕೃತ್ಯವನ್ನು ನಡೆಸಲು ಪ್ರಯತ್ನಿಸಿದ್ದನ್ನು ತಡೆಗಟ್ಟುವಲ್ಲಿ ಕರಾವಳಿ ಕಾವಲು ಪೊಲೀಸ್ ಮತ್ತು ಮೂರು ಜಿಲ್ಲೆಗಳ ಕಾನೂನು ಸುವ್ಯವಸ್ಥೆ ಪೊಲೀಸರು ಯಶಸ್ವಿಯಾಗಿರುವುದಾಗಿ ಪ್ರಕಟನೆ ತಿಳಿಸಿದೆ.
Next Story