ಕರ್ನಾಟಕ ಮುಸ್ಲಿಮ್ ಜಮಾಅತ್ ದ.ಕ. ವೆಸ್ಟ್ ಜಿಲ್ಲಾಧ್ಯಕ್ಷರಾಗಿ ಅಲಿಕುಂಞಿ ಹಾಜಿ ಪಾರೆ ಆಯ್ಕೆ
ಮಂಗಳೂರು: ಕರ್ನಾಟಕ ಮುಸ್ಲಿಮ್ ಜಮಾಅತ್ ದ.ಕ. ವೆಸ್ಟ್ ಜಿಲ್ಲೆಯ ಅಧ್ಯಕ್ಷರಾಗಿ ಅಲಿಕುಂಞಿ ಹಾಜಿ ಪಾರೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಪಡೀಲ್ ನಲ್ಲಿರುವ ಇಲ್ಮ್ ಸೆಂಟರ್ ನಲ್ಲಿ ಜರುಗಿದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಕೆ.ಕೆ.ಎಂ.ಮುಹಿಯುದ್ದೀನ್ ಕಾಮಿಲ್ ಸಖಾಫಿ ಸುರಿಬೈಲು ಸಭೆಯನ್ನು ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ಎಂ.ಅಶ್ರಫ್ ಸಅದಿ ಮಲ್ಲೂರು ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಜಿಲ್ಲಾ ಕೋಶಾಧಿಕಾರಿ ಎಸ್.ಕೆ.ಅಬ್ದುಲ್ ಖಾದರ್ ಹಾಜಿ ಮುಡಿಪು, ಕಾರ್ಯದರ್ಶಿಗಳಾದ ಬಶೀರ್ ಹಾಜಿ ಕುಂಬ್ರ, ಇಸ್ಮಾಯೀಲ್ ಕಿನ್ಯ, ಬಿ.ಎ.ಇಕ್ಬಾಲ್ ಕೃಷ್ಣಾಪುರ, ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಅನ್ವರ್ ಹಾಜಿ ಗೂಡಿನಬಳಿ, ಎ.ಎಂ.ಇಸ್ಮಾಯೀಲ್ ಸಅದಿ ಉರುಮನೆ, ಬದ್ರುದ್ದೀನ್ ಹಾಜಿ ಬಜ್ಪೆ, ಸಾಮನಿಗೆ ಮದನಿ, ಸಿದ್ದೀಕ್ ಸಖಾಫಿ ಉಪಸ್ಥಿತರಿದ್ದರು.
ಇತ್ತೀಚೆಗೆ ಅಗಲಿದ ಸಾಮಾಜಿಕ, ಧಾರ್ಮಿಕ ಮುಂದಾಳು ಹಾಜಿ ಬಿ.ಎಂ.ಮುಮ್ತಾಝ್ ಅಲಿಯವರಿಗಾಗಿ ನ.2ರಂದು ಬೆಳಗ್ಗೆ 9:30ಕ್ಕೆ ಪಂಪ್ ವೆಲ್ ನ ಮಸ್ಜಿದುತ್ತಖ್ವಾದಲ್ಲಿ ದುಆಃ ಮಜ್ಲಿಸ್ ನಡೆಸಲು ತೀರ್ಮಾನಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಮ್ ಸಅದಿ ಖತರ್ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ಜಲೀಲ್ ಬ್ರೈಟ್ ವಂದಿಸಿದರು.