ಮಂಗಳೂರು: ಶ್ರೀರಾಮ್ ಫೈನಾನ್ಸ್ನಿಂದ ವಿದ್ಯಾರ್ಥಿ ವೇತನ ವಿತರಣೆ
ಮಂಗಳೂರು: ವಾಹನದ ಉದ್ಯಮಕ್ಕೆ ಹಣಕಾಸಿನ ನೆರವು ನೀಡುತ್ತಿರುವ ಶ್ರೀರಾಮ್ ಫೈನಾನ್ಸ್ ಲಿ.ನಿಂದ ಸಾರಿಗೆ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ ಮತ್ತು ಮಾಲಕರ ಮಕ್ಕಳ ಕಲಿಕೆಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯ ಕ್ರಮ ಶನಿವಾರ ನಗರದ ಉರ್ವಸ್ಟೋರ್ನ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಯುವ ಐಪಿಎಸ್ ಅಧಿಕಾರಿ ಶ್ರಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದರು. ಎಸ್ಎಫ್ಎಲ್ ಎಕ್ಸಿಕ್ಯೂಟಿವ್ ಡೈರಕ್ಟರ್ ಶ್ರೀಧರ್ ಮಟಮ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಣಚೂರು ವಿದ್ಯಾಸಂಸ್ಥೆಯ ಸ್ಥಾಪಕ ಡಾ. ಹಾಜಿ ಯು.ಕೆ ಮೋನು ವಿದ್ಯಾರ್ಥಿ ವೇತನ ವಿತರಿಸಿದರು.
ಶರಚ್ಚಂದ್ರ ಭಟ್ ಕಾಕುಂಜೆ, ಕುಮಾರ್ ಬಿ.ಆರ್, ಉದ್ಯಮಿ ಸಂತೋಷ್ ಕುಮಾರ್ ರೈ ಬೋಳಿಯಾರ್, ವಕೀಲರ ಸಂಘದ ಅಧ್ಯಕ್ಷ ಹೆಚ್.ವಿ. ರಾಘವೇಂದ್ರ, ಪ್ರೆಸ್ಕ್ಲಬ್ ಅಧ್ಯಕ್ಷ ಹರೀಶ್ ರೈ, ನಿರ್ದೇಶಕ ವಿಜಯಕುಮಾರ್ ಕೊಡಿಯಲ್ಬೈಲ್, ಬಿ.ಎಂ. ಭಾರತಿ ಅತಿಥಿಗಳಾಗಿದ್ದರು.
ಸತ್ಯನಾರಾಯಣ ಕೆ.ವಿ., ಉಲ್ಲಾಸ್ ನಾಯಕ್, ನಾಗರಾಜ್ ಬಿ, ಸದಾಶಿವ ಅಮೀನ್, ಚಂದ್ರಹಾಸ್ ಆಳ್ವ, ಚೇತನ್ ಅರಸ್ ಮತ್ತಿತರರು ಉಪಸ್ಥಿತರಿದ್ದರು.