ರಬ್ಬರ್ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು: ರಬ್ಬರ್ ಮಂಡಳಿ ರಬ್ಬರ್ ಉತ್ಪಾದನಾ ಇಲಾಖೆಯ ವಿಸ್ತರಣಾ ಸೇವೆಗಳಲ್ಲಿ ತಾಂತ್ರಿಕ ಮಾನವ ಸಂಪನ್ಮೂಲವನ್ನು ಯುವ ವೃತ್ತಿಪರರಾಗಿ ತೊಡಗಿಸಿಕೊಳ್ಳಲು ಯುವ ವೃತ್ತಿಪರರಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ರಬ್ಬರ್ ಉತ್ಪಾದನಾ ಇಲಾಖೆಯಲ್ಲಿನ ವಿಸ್ತರಣಾ ಸೇವೆಗಳು, ಸಾಂಪ್ರದಾಯಿಕವಲ್ಲದ ಪ್ರದೇಶದಲ್ಲಿ (ಕೇರಳ ಮತ್ತು ತುಳುನಾಡು ಹೊರತುಪಡಿಸಿ) ಮತ್ತು ಈಶಾನ್ಯ ರಾಜ್ಯಗಳ ಪ್ರದೇಶದಲ್ಲಿರುತ್ತದೆ. ನೇಮಕಾತಿಯ ಸ್ವರೂಪ ತಾತ್ಕಾಲಿಕ ವಾಗಿದೆ. ತಿಂಗಳಿಗೆ 40,000 ರೂ.ಗಳ ವೇತನವಾಗಿರುತ್ತದೆ. ಈಶಾನ್ಯ ರಾಜ್ಯಗಳ ಪ್ರದೇಶದಲ್ಲಿ ಲಭ್ಯವಿರುವ ಹುದ್ದೆಗಳ ಸಂಖ್ಯೆ 40 ಮತ್ತು ಸಾಂಪ್ರದಾಯಿಕವಲ್ಲದ ಪ್ರದೇಶದಲ್ಲಿ 10 ಹುದ್ದೆಗಳು ಲಭ್ಯವಿದೆ.
ಅಭ್ಯರ್ಥಿಗಳು ಪಡೆದ ವಿಶ್ವವಿದ್ಯಾಲಯದಿಂದ ಕೃಷಿ/ತೋಟಗಾರಿಕೆ/ಅರಣ್ಯಶಾಸತ್ರದಲ್ಲಿ ಬಿಎಸ್ಸಿ ಪದವಿ ಅಥವಾ ಸಸ್ಯಶಾಸ್ತ್ರ/ಸಸ್ಯ ವಿಜ್ಞಾನದಲ್ಲಿ ಒಛಿ. ಪದವಿಯನ್ನು ಹೊಂದಿರಬೇಕು. ಈಶಾನ್ಯ ಪ್ರದೇಶದ ಅಭ್ಯರ್ಥಿಗಳು ಮಾತ್ರ ಈಶಾನ್ಯ ರಾಜ್ಯಗಳ ಪ್ರದೇಶದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳ ಅಭ್ಯರ್ಥಿಗಳಿಗೆ ಸಾಂಪ್ರದಾಯಿಕವಲ್ಲದ ಪ್ರದೇಶದ ಹುದ್ದೆಗಳಿಗೆ ಆದ್ಯತೆ ನೀಡಲಾಗುವುದು. ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿದಾರರ ಗರಿಷ್ಟ ವಯಸ್ಸಿನ ಮಿತಿ 2024ರ ಅಕ್ಟೋಬರ್ಗೆ 30 ವರ್ಷವಾಗಿರಬೇಕು. ಈ ಹುದ್ದೆಯ ಅವಧಿಯು 2026ರ ಮಾರ್ಚ್ 31ರವರೆಗೆ ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾಂಪ್ರದಾಯಿಕವಲ್ಲದ ಪ್ರದೇಶ (NT - Non-Traditional Region) (NE- North Eastern Region) ಉತ್ಪಾದನಾ ಇಲಾಖೆಯ ವಿಸ್ತರಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಕರ್ತವ್ಯಗಳನ್ನು ನಿಯೋಜಿಸಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ರಬ್ಬರ್ ಬೋರ್ಡ್ ವೆಬ್ಸೈಟ್ www.rubberboard.org.inನಲ್ಲಿ ಆನ್ಲೈನ್ ನೇಮಕಾತಿ ಅರ್ಜಿ (Online Recruitment Application - ORA) ಲಿಂಕ್ ಬಳಸಿಕೊಂಡು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 13ರ ಕೊನೆಯ ದಿನವಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ ಎಂದು ಕೊಟ್ಟಾಯಂ ರಬ್ಬರ್ ಮಂಡಳಿಯ ಉತ್ಪಾದನಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.