ಸೋಮೇಶ್ವರ| ಪೈಪ್ಲೈನ್ ಕಾಮಗಾರಿ: ಪರ್ಯಾಯ ರಸ್ತೆ ಬಳಕೆಗೆ ಸೂಚನೆ
ಸಾಂದರ್ಭಿಕ ಚಿತ್ರ
ಉಳ್ಳಾಲ : ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ ಬೈಪಾಸ್ ಮುಖ್ಯ ರಸ್ತೆಯಿಂದ ಬಾಲಕೃಷ್ಣ ಮಂದಿರದವರೆಗಿನ ಮುಖ್ಯರಸ್ತೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪೈಪ್ಲೈನ್ ಕಾಮಗಾರಿಯು ಪ್ರಗತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ನ.7 ರಿಂದ ನ.10ರವರೆಗೆ ಸಂಪೂರ್ಣ ಬಂದ್ ಮಾಡಲಾಗುವುದು.
ಪರ್ಯಾಯ ಮಾರ್ಗವಾಗಿ ದೇರಳಕಟ್ಟೆ, ಯೆನಪೋಯ, ಕೊಲ್ಯ ಶಾರದೋತ್ಸವ ಸಮಿತಿ ಪಕ್ಕದ ರಸ್ತೆ, ಕೊಲ್ಯ ಕನೀರ್ ತೋಟ ರಸ್ತೆಯನ್ನು ಉಪಯೋಗಿಸಬೇಕು ಎಂದು ಸೋಮೇಶ್ವರ ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
Next Story