ಮರ್ಕಝ್ ಕುಂಬ್ರ ದುಬೈ ಸಮಿತಿಯ ಮಹಾಸಭೆ: ಪದಾಧಿಕಾರಿಗಳ ಆಯ್ಕೆ
ಸಲೀಂ ಸಖಾಫಿ | ಇರ್ಷಾದ್ ಕೊಂಡಂಗೇರಿ | ಅಬ್ದುಲ್ ರಝಾಕ್ ಬುಸ್ತಾನಿ
ಪುತ್ತೂರು, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ದುಬೈ ಘಟಕದ ಮಹಾಸಭೆಯು ದುಬೈ ಸೀ ಲಾರ್ಡ್ ಹೋಟೆಲ್ ಸಭಾಂಗಣದಲ್ಲಿ ಸಂಸ್ಥೆಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ಡಾ ಎಮ್ಮೆಸ್ಸೆಂ. ಝೖನೀ ಕಾಮಿಲ್ ಹಾಗೂ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಅವರ ನೇತೃತ್ವದಲ್ಲಿ ನಡೆದು ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಗೌರವಾಧ್ಯಕ್ಷರಾಗಿ ಹಾಜಿ ಬಶೀರ್ ಬೊಳುವಾರ್, ಅಧ್ಯಕ್ಷರಾಗಿ ಸಲೀಂ ಸಖಾಫಿ ಮೈದಾನಿಮೂಲೆ, ಪುತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ಇರ್ಷಾದ್ ಕೊಂಡಂಗೇರಿ, ಕೊಡಗು, ಕೋಶಾಧಿಕಾರಿಯಾಗಿ ಅಬ್ದುಲ್ ರಝಾಕ್ ಬುಸ್ತಾನಿ ಪರ್ಲಡ್ಕ, ಉಪಾಧ್ಯಕ್ಷರಾಗಿ ಅಮೀನ್ ಸಅದಿ ಚೆನ್ನಾರ್, ಕಲಂದರ್ ಕಬಕ, ಮುಹಮ್ಮದ್ ಅಲಿ ಕನ್ಯಾನ, ಕಾರ್ಯದರ್ಶಿಗಳಾಗಿ ರಿಫಾಈ ಗೂನಡ್ಕ, ಆಸಿಫ್ ಇಂದ್ರಾಜೆ, ತಾಜುದ್ದೀನ್ ಈಶ್ವರಮಂಗಿಲ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಅಝೀಝ್ ಅಹ್ಸನಿ ಇಂದ್ರಾಜೆ, ರಹೀಮ್ ಕೋಡಿ, ಆಬಿದ್ ಸಅದಿ ಎಮ್ಮೆಮಾಡು, ಅಝೀಝ್ ಲತೀಫಿ ಮಾಣಿ, ಅಬ್ದುಲ್ ಹಕೀಮ್ ಸಖಾಫಿ ತೆಕ್ಕಾರು, ಅಬ್ದುಲ್ ಮಜೀದ್ ಮಂಜನಾಡಿ, ನಿಯಾಝ್ ಬಸರಾ, ಹಂಝ ಎಮ್ಮೆಮಾಡು, ಹನೀಫ್ ಗಟ್ಟಮನೆ, ಸೈಫುದ್ದೀನ್ ಪಟೇಲ್ ಆರಂತೋಡ್, ಅಬ್ದುಲ್ ಘನಿ ಉಳ್ಳಾಲ, ಅಬೂಬಕರ್ ಸುನ್ನಂಗಳ, ಅಬ್ದುಲ್ ಶಕೂರ್ ಉಳ್ಳಾಲ, ಕೆ ಕೆ ಅಬೂಬಕರ್ ಮಂಜ, ಸಾದಿಖ್ ಕಾಪು, ಮಜೀದ್ ಬಿಲಾಲ್ ಈಶ್ವರಮಂಗಿಲ, ಅಬ್ದುಸ್ಸಮದ್ ಬಿರಾಲಿ, ಮುಸ್ತಫಾ ಮಾಸ್ಟರ್ ಉಳ್ಳಾಲ, ರಾಶಿದ್ ಕುವೆಂಜ, ಅಬ್ದುಲ್ ಮಜೀದ್ ಮೈದಾನಿಮೂಲೆ, ಹೈದರ್ ಅಲಿ ಮೈದಾನಿ ಮೂಲೆ, ಸುಲೈಮಾನ್ ಮುಕ್ವೆ, ಝೈನುದ್ದೀನ್ ಪುಣಚ, ಅಶ್ರಫ್ ಮದನಿ ಕುಪ್ಪೆಟ್ಟಿ, ಇಲ್ಯಾಸ್ ಮದನಿ ಬರ್ಷಾ, ಅಬ್ದುಲ್ ನಾಸಿರ್ ಸ ಅದಿ ಎಮ್ಮೆಮಾಡು, ಇಖ್ಬಾಲ್ ಬಸರಾ, ಶಫೀಕ್ ಪರ್ಲಡ್ಕ, ಸಾಬಿತ್ ಪರ್ಲಡ್ಕ,ಹಸನ್ ಜನ್ಸಾಲೆ, ರಫೀಕ್ ಚಾಮಿಯಾಲ್, ಫೈಸಲ್ ಮುಹಮ್ಮದ್ ಹಿಮಮಿ ಪಳ್ಳಂಗೋಡ್ ಇವರನ್ನು ಆರಿಸಲಾಯಿತು.
ಸಲಹೆಗಾರರಾಗಿ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು, ಎಂ. ಇ. ಮೂಳೂರು, ಹಾಜಿ ಅಶ್ರಫ್ ಅಡ್ಯಾರ್, ಇಸ್ಮಾಯಿಲ್ ಮದನಿನಗರ, ನಝೀರ್ ಹಾಜಿ ಕೆಮ್ಮಾರ,ಇಬ್ರಾಹಿಂ ಮದನಿ ಸಾಮಣಿಗೆ, ಕೆ.ಎಂ. ಇಬ್ರಾಹಿಂ ಹಾಜಿ ಕಿನ್ಯ,ಅಬ್ದುಲ್ ಖಾದರ್ ಸಾಲೆತ್ತೂರು, ನವಾಝ್ ಕೋಟೆಕಾರ್, ಹಾಜಿ ಅಬೂಬಕರ್ ಕೊಟ್ಟಮುಡಿ, ಅಬ್ದುಲ್ಲತೀಫ್ ತಿಂಗಲಾಡಿ, ಇಖ್ಬಾಲ್ ಕಾಜೂರ್ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮರ್ಕಝ್ ಕುಂಬ್ರ ಯುಎಇ ರಾಷ್ಟೀಯ ಸಮಿತಿಯ ಅಧ್ಯಕ್ಷ ಮುಹಮ್ಮದ್ ಶಕೂರ್ ಮಣಿಲ ಅಧ್ಯಕ್ಷತೆ ವಹಿಸಿದರು, ಅಶ್ರಫ್ ಹಾಜಿ ಅಡ್ಯಾರ್ ಉದ್ಘಾಟಿಸಿದರು. ಕೆಸಿಎಫ್ ನಾರ್ತ್ ಝೋನ್ ಪ್ರೆಸಿಡೆಂಟ್ ಇಸ್ಮಾಯಿಲ್ ಮದನಿನಗರ್, ಅಬ್ದುಲ್ ಖಾದರ್ ಸಾಲೆತ್ತೂರ್, ಅಬ್ದುಲ್ಲತೀಫ್ ತಿಂಗಳಾಡಿ ಮಾತನಾಡಿ ಶುಭ ಹಾರೈಸಿದರು. ಇರ್ಷಾದ್ ಕೊಂಡಂಗೇರಿ ಸ್ವಾಗತಿಸಿ ಸಲೀಂ ಸಖಾಫಿ ಮೈದಾನಿಮೂಲೆ ಧನ್ಯವಾದ ಸಲ್ಲಿಸಿದರು.