ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು: ಪ್ರಸಕ್ತ (2024-25ನೇ) ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆವರಣ ಮತ್ತು ಘಟಕ ಕಾಲೇಜು ಗಳ ಸ್ನಾತಕ/ಸ್ನಾತಕೋತ್ತರ ಕೋರ್ಸುಗಳಿಗೆ ಅಗತ್ಯವಿರುವ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಟ ಶೇ.೫೫ ಅಂಕಗಳು ಹಾಗೂ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಟ ಶೇ.50 ಅಂಕಗಳು), ಯುಜಿಸಿ/ಎನ್‌ಇಟಿ/ಎಸ್‌ಎಲ್‌ಇಟಿ ಉತ್ತೀರ್ಣತೆ/ಎಂಫಿಲ್/ಪಿಹೆಚ್‌ಡಿ ಪದವಿ ಪ್ರಮಾಣಪತ್ರ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇಂಗ್ಲಿಷ್ (UG), ಅರ್ಥಶಾಸ್ತ್ರ (PG), ಸಸ್ಯಶಾಸ್ತ್ರ (PG), ಸೈಬರ್ ಸೆಕ್ಯುರಿಟಿ (PG), ಕಂಪ್ಯೂಟರ್ ಸೈನ್ಸ್ (UG/ PG), ವಾಣಿಜ್ಯ ಶಾಸ್ತ್ರ (PG)(Specilization Finance Mgt) ಹಾಗೂ ಕೈಗಾರಿಕ ರಸಾಯನಶಾಸ್ತ್ರ (PG) ವಿಷಯದ ಅತಿಥಿ ಉಪನ್ಯಾಸಕರು ಅರ್ಜಿಯನ್ನು ವಿವಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ
ಅರ್ಜಿ ಸಲ್ಲಿಸಲು ನ.19 ಕೊನೆಯ ದಿನವಾಗಿದೆ. ನ.22ರಂದು ಬೆಳಗ್ಗೆ ೯ಕ್ಕೆ ಕೊಣಾಜೆ ಮಂಗಳಗಂಗೋತ್ರಿಯಲ್ಲಿರುವ ವಿವಿಯ ಆಡಳಿತ ಸೌಧದಲ್ಲಿ ಸಂದರ್ಶನ ನಡೆಯಲಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಹಾಗೂ ದಾಖಲೆಯ ಜೆರಾಕ್ಸ್ ಪ್ರತಿಗಳೊಂದಿಗೆ ವಿಶ್ವವಿದ್ಯಾನಿಲಯ ಆಡಳಿತ ಸೌಧದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಕೊನೆಯ ದಿನಾಂಕದ ನಂತರ ಸ್ವೀಕೃತವಾದ ಮತ್ತು ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅತಿಥಿ ಉಪನ್ಯಾ ಸಕರ ನೇಮಕಾತಿಯನ್ನು ಯುಜಿಸಿ ನಿಗದಿಪಡಿಸಿದ ಮಾನದಂಡ ಹಾಗೂ ಕರ್ನಾಟಕ ಸರಕಾರದ ಮೀಸಲಾತಿ ಆದೇಶದ ಅನುಸಾರ ಮಾಡಲಾಗುವುದು.
ಅಭ್ಯರ್ಥಿಗಳು ತಮ್ಮ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರು ವಿವಿಯ ಯಾವುದೇ ಘಟಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು. ಅರ್ಜಿ ಶುಲ್ಕ ರೂ.250 ಹಾಗೂ (SC/ST/Cat-1 ಅಭ್ಯರ್ಥಿಗಳಿಗೆ ರೂ.125)ನ್ನು ಮಂಗಳೂರು ವಿವಿಯ ವೆಬ್‌ಸೈಟ್ www.mangaloreuniversity.ac.in
ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ವಿವಿಯ ನಿರ್ಣಯ ಅಂತಿಮವಾಗಿದೆ. ಅವಶ್ಯಕತೆ ಇದ್ದಲ್ಲಿ ಮಾತ್ರ ಅತಿಥಿ ಉಪನ್ಯಾಸ ಕರ ಆಯ್ಕೆ ಮಾಡುವ ಅಧಿಕಾರವನ್ನು ವಿವಿ ಕಾಯ್ದಿರಿಸಿದೆ ಎಂದು ಮಂಗಳೂರು ವಿವಿ ಕುಲಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.