ಫಾದರ್ ಮುಲ್ಲರ್ನಲ್ಲಿ ಕಲಾಸೃಷ್ಟಿ ತಂಡದಿಂದ ಜಾದೂ ಪ್ರದರ್ಶನ
ಮಂಗಳೂರು : ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ಹಾಗೂ ನರ್ಸಿಂಗ್ ವಿಭಾಗದ ವತಿಯಿಂದ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಕಲಾಸೃಷ್ಟಿ ತಂಡದಿಂದ ಜಾದೂ ಪ್ರದರ್ಶನ ನಡೆಯಿತು.
ಕಲಾಸೃಷ್ಟಿ ತಂಡದ ಮುಖ್ಯಸ್ಥೆ, ಇನ್ನೋಳಿಯ ಬ್ಯಾರೀಸ್ ತಾಂತ್ರಿಕ ಸಂಸ್ಥೆಯ ಪ್ರೊಫೆಸರ್ ಹಾಗೂ ಜಾದೂ ಪ್ರಶಸ್ತಿ ವಿಜೇತೆ ಮುಬೀನಾ ಫರ್ವೀನ್ ತಾಜ್ ಹಾಗೂ ಕಲಾಸೃಷ್ಟಿ ಬಳಗದ ನಿರ್ದೇಶಕಿ ಅಂತಾರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಸಾಧಾರಣ ಪ್ರತಿಭೆ ಪ್ರಶಸ್ತಿ ವಿಜೇತೆ ಶಮಾ ಫರ್ವೀನ್ ಮತ್ತಿತರ ಕಲಾವಿ ದರು ವಿಸ್ಮಯಕಾರಿ ಜಾದೂ ಪ್ರದರ್ಶನ ನೀಡಿದರು.
ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಅನಿಲ್ ಶೆಟ್ಟಿಯ ಮೂಲಕ ಹಾಗೂ ನರ್ಸಿಂಗ್ ವಿಭಾಗ ಮುಖ್ಯಸ್ಥರ ಸಮ್ಮುಖದಲ್ಲಿ ಜಾದೂವಿನ್ ಮುಖಾಂತರ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಂಬಿಕಾ ವಿದ್ಯಾ ಸಂಸ್ಥೆಯ ಹತ್ತನೇ ತರಗತಿಯ ರೋಶನ್ ಶರೀಫ್ ಮತ್ತು ನಾಲ್ಕನೇ ತರಗತಿಯ ಚಾಂದ್ ಶರೀಫ್ ಮಾಯಾಜಾಲಗಳನ್ನು ಪ್ರದರ್ಶಿಸಿದರು. ಫಾತಿಮಾ ಶರೀಫ್ ಮತ್ತು ಅಹ್ಮದ್ ಶರೀಫ್ ಸಹಕರಿಸಿದ್ದರು. ಡಾ ಸುರೇಶ ನೆಗಳಗುಳಿ ಮತ್ತಿತರರು ಉಪಸ್ಥಿತರಿದ್ದರು.