ಕುಮಾರ ಸ್ವಾಮಿ ಸತ್ಯ ಹೇಳಿದ್ದುಂಟಾ: ಸಚಿವ ಝಮೀರ್ ಅಹ್ಮದ್ ಪ್ರಶ್ನೆ
ಝಮೀರ್ ಅಹ್ಮದ್
ಮಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ಯಾವತ್ತಾದರು ಸತ್ಯ ಹೇಳಿದ್ದುಂಟಾ ಎಂದು ಸಚಿವ ಝಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ.
ಕಾಸರಗೋಡು ಪ್ರವಾಸದ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ? ಅವರಿಗೆ ಯೂ ಟರ್ನ್ ಕುಮಾರಸ್ವಾಮಿ ಅಂತ ಹೆಸರಿದೆ. ಇನ್ನು ಲೋಕಾಯುಕ್ತ ದಿಂದ ಈವರೆಗೆ ಯಾವುದೇ ನೋಟಿಸ್ ನನಗೆ ಬಂದಿಲ್ಲ. ನೋಟಿಸ್ ಕೊಡುವುದು ಸಹಜ ಪ್ರಕ್ರಿಯೆಯಾಗಿದೆ. ನೋಟಿಸ್ ಬಂದ ಮೇಲೆ ವಿಚಾರಣೆಗೆ ಹಾಜರಾಗಲೇಬೇಕು ಎಂದ ಝಮೀರ್ ಅಹ್ಮದ್, ಕುಮಾರಸ್ವಾಮಿಯವರು ಮುಸ್ಲಿಮರ ಮತ ತನಗೆ ಬೇಕಾಗಿಲ್ಲ ಅಂತ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡುವುದು ಅನಿವಾರ್ಯ ವಾಯಿತು. ಮುಸ್ಲಿಮರು ಪಂಚರ್ ಹಾಕುವವರು, ವೆಲ್ಡಿಂಗ್ ಮಾಡುವವರು ಅಂತ ಲಘುವಾಗಿ ಮಾತಾಡಿದ್ದಾರೆ. ಅಂತಹ ಮುಸ್ಲಿಮರ ಬಳಿ ಯಾಕೆ ಓಟು ಕೇಳುತ್ತೀರಿ ಅಂತ ಪ್ರಶ್ನಿಸಿದ್ದು ತಪ್ಪಾ? ಎಂದು ತನ್ನ ಮಾತನ್ನು ಸಮರ್ಥಿಸಿದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಯೋಗಿಶ್ವರ್ 18ರಿಂದ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಸಚಿವ ಝಮೀರ್ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.