ಡಾ.ತಾಳ್ತಜೆಗೆ ಕನಕ ಗೌರವ ಪ್ರಶಸ್ತಿ ಪ್ರದಾನ: ಪುರಸ್ಕಾರ ನೀಡಿ ಗೌರವಿಸಿದ ಸಿಎಂ
ಕನಕ ಜಯಂತಿ ಕಾರ್ಯಕ್ರಮ
ಉಪ್ಪಿನಂಗಡಿ: ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರ ಅಧ್ಯಯನ ಕೇಂದ್ರವು ಕೊಡಮಾಡುವ `ಕನಕ ಗೌರವ ಪ್ರಶಸ್ತಿ'ಯನ್ನು ಹಿರಿಯ ಸಾಹಿತಿ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪಂಜಳದ ಡಾ. ತಾಳ್ತಜೆ ವಸಂತ ಕುಮಾರ ಅವರಿಗೆ ನ.18ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರದಾನ ಮಾಡಿದರು.
ಕನಕ ಗೌರವ ಪ್ರಶಸ್ತಿಯು 75 ಸಾವಿರ ನಗದು ಹಾಗೂ ಪುರಸ್ಕಾರವನ್ನು ಒಳಗೊಂಡಿದೆ. ನಾನಾ ಕಾರಣಗಳಿಂದ ನಾಲ್ಕು ವರ್ಷದಿಂದ `ಕನಕ ಗೌರವ ಪ್ರಶಸ್ತಿ' ಹಾಗೂ `ಕನಕ ಯುವ ಪುರಸ್ಕಾರ'ವನ್ನು ಘೋಷಣೆ ಮಾಡದೇ ಇದ್ದ ಅಧ್ಯಯನ ಕೇಂದ್ರವು ಈ ಬಾರಿ ಎರಡೂ ಪ್ರಶಸ್ತಿಗೆ ಸಾಹಿತಿಗಳನ್ನು ಆಯ್ಕೆ ಮಾಡಿದ್ದು, 2021-22ನೇ ಸಾಲಿನ ಪ್ರಶಸ್ತಿಯನ್ನು ಡಾ. ತಾಳ್ತಜೆ ವಸಂತ ಕುಮಾರ, 2022-23ನೇ ಸಾಲಿನ ಪ್ರಶಸ್ತಿಯನ್ನು ಡಾ. ನೀಲಪ್ಪ ಮೈಲಾರಪ್ಪ ಹಾವೇರಿ, 2023-24ನೇ ಸಾಲಿನ ಪ್ರಶಸ್ತಿಯನ್ನು ಡಾ. ಎಚ್.ಎನ್. ಮುರಳೀಧರ ಬೆಂಗಳೂರು, 2024-25ನೇ ಸಾಲಿನ ಪ್ರಶಸ್ತಿಯನ್ನು ಡಾ. ಜಿ.ವಿ. ಆನಂದಮೂರ್ತಿ ತುಮಕೂರು ಅವರಿಗೆ ಪ್ರದಾನ ಮಾಡಲಾಯಿತು.
ಇದೇ ಸಂದರ್ಭ `ಕನಕ ಯುವ ಪುರಸ್ಕಾರ'ವನ್ನು ಕೂಡಾ ಪ್ರದಾನ ಮಾಡಲಾಯಿತು. 2021-22ನೇ ಸಾಲಿನ ಪ್ರಶಸ್ತಿ ಯನ್ನು ಡಾ. ಅನಿಲ್ ಕುಮಾರ್, ಮೈಸೂರು, 2022-23ನೇ ಸಾಲಿನ ಪ್ರಶಸ್ತಿಯನ್ನು ಡಾ. ಚಿಕ್ಕಮಗಳೂರು ಗಣೇಶ್, 2023-24ನೇ ಸಾಲಿನ ಪ್ರಶಸ್ತಿಯನ್ನು ಡಾ. ಉಮೇಶ ಎಂ. (ಉಬಾಮ), ವಿಜಯನಗರ ಅವರಿಗೆ ನೀಡಿ, ಗೌರವಿಸಲಾ ಯಿತು. 2024-25ನೇ ಸಾಲಿಗೆ ಅರ್ಹ ಯುವ ಪುರಸ್ಕøತರು ಅಲಭ್ಯವಾಗಿದ್ದರಿಂದ ಯಾರನ್ನೂ ಈ ಪ್ರಶಸ್ತಿಗೆ ಆಯ್ಕೆ ಮಾಡಿರಲಿಲ್ಲ. `ಕನಕ ಯುವ ಪುರಸ್ಕಾರ'ವು 50 ಸಾವಿರ ರೂ. ನಗದು ಹಾಗೂ ಪುರಸ್ಕಾರವನ್ನೊಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.