ಹಣ ಹೂಡಿಕೆ ಮಾಡಿಸಿ ವಂಚನೆ: ಪ್ರಕರಣ ದಾಖಲು
ಮಂಗಳೂರು: ವೆಬ್ಸೈಟ್ ಮೂಲಕ ಹಣವನ್ನು ಹೂಡಿಕೆ ಮಾಡಿಸಿ ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇರಾ ಪಾಂಡೆ ಎಂಬಾಕೆ ಡೇಟಿಂಗ್ ಆ್ಯಪ್ ಮೂಲಕ ತನ್ನೊಂದಿಗೆ ಪರಿಚಯ ಮಾಡಿಕೊಂಡು ಸ್ಪ್ರೆಡೆಕ್ಸ್ ಎಂಬ ವೆಬ್ಸೈಟ್ ಮೂಲಕ ಹಣ ಹೂಡಿಕೆ ಮಾಡುವಂತೆ ತಿಳಿಸಿ ಅದೇ ವೆಬ್ಸೈಟ್ನ್ನು ಹೋಲುವಂತಹ ಬೇರೊಂದು ವೆಬ್ಸೈಟ್ ಲಿಂಕ್ ಕಳುಹಿಸಿದ್ದಳು. ಬಳಿಕ ತಾನು ಹಂತ ಹಂತವಾಗಿ 8.50 ಲ.ರೂ. ಹೂಡಿಕೆ ಮಾಡಿದ್ದೆ. ಈ ಪೈಕಿ 1.20 ಲ.ರೂ. ವಿತ್ಡ್ರಾ ಮಾಡಿದ್ದರು. ಉಳಿದ 7.30 ಲ.ರೂ. ವಾಪಸ್ ಪಡೆಯಲು ಯತ್ನಿಸಿದಾಗ ಶೇ.೩೦ರಷ್ಟು ತೆರಿಗೆ ಪಾವತಿಸಬೇಕು ಎಂದು ಇರಾ ಪಾಂಡೆ ತಿಳಿಸಿದಳು. ಆವಾಗ ತಾನು ಮೋಸ ಹೋಗಿರುವುದು ಗೊತ್ತಾಯಿತು ಎಂದು ಹಣ ಕಳಕೊಂಡ ವ್ಯಕ್ತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story