ಬಾಲಕಿ ನಾಪತ್ತೆ
ಮಂಗಳೂರು: ಮೂಡುಶೆಡ್ಡೆ ಪಂಜುರ್ಲಿ ಕಟ್ಟೆ ಹತ್ತಿರದ ಜಾರದ ಬೆಟ್ಟು ಮನೆ ನಿವಾಸಿ ಕ್ರಿಸ್ಟಲ್ ಕ್ಲೆಮೆಟೀನಾ ಡಿಸೋಜ (14) ಎಂಬಾಕೆ ನ.17ರಿಂದ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
4.5 ಅಡಿ ಎತ್ತರದ, ಎಣ್ಣೆ ಕಪ್ಪುಮೈಬಣ್ಣದ, ಬಿಳಿ ಬಣ್ಣದ, ಗುಲಾಬಿ ಹೂಗಳಿರುವ ಟಾಪ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುವ ಈಕೆ ಕನ್ನಡ, ತುಳು ಮಾತನಾಡುತ್ತಾಳೆ. ಕಾಣೆಯಾದ ಈ ಬಾಲಕಿಯ ಗುರುತು ಪತ್ತೆಯಾದಲ್ಲಿ ಕಾವೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story