ಅಡ್ಕರೆಪಡ್ಪು| ಜಮೀಯ್ಯತ್ತುಲ್ ಫಲಾಹ್ ಗ್ರೀನ್ ವೀವ್ ಸಂಸ್ಥೆಯ ವಾರ್ಷಿಕೋತ್ಸವ
ಕೊಣಾಜೆ, ಡಿ.14: ಜಮೀಯ್ಯತ್ತುಲ್ ಫಲಾಹ್ ಗ್ರೀನ್ ವಿದ್ಯಾಸಂಸ್ಥೆ ಅಡ್ಕರೆಪಡ್ಪು ಕೊಣಾಜೆ ಇದರ ವಾರ್ಷಿಕೋತ್ಸವ ಕಾರ್ಯಕ್ರಮವು ಶಾಲಾ ಮೈದಾನದಲ್ಲಿ ನಡೆಯಿತು.
ಕರ್ನಾಟಕ ಸರಕಾರದ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್ ಇದರ ಅಧ್ಯಕ್ಷರಾದ ಯು.ಟಿ.ಇಫ್ತಿಕಾರ್ ಅಲಿ ಫರೀದ್ ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು ಆಧುನಿಕ ಶಿಕ್ಷಣದ ಮೂಲಕ ತಮ್ಮ ಮಕ್ಕಳನ್ನು ರೂಪಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇನೆಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಸರಕಾರದ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಕಲಿತು ಉಜ್ವಲ ಭವಿಷ್ಯ ರೂಪಿಸಲು ಕರೆ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜಿ.ಮುಹಮ್ಮದ್ ಹನೀಫ್ ಹಾಗೂ ಜಮೀಯ್ಯತ್ತುಲ್ ಫಲಾಹ್ ಮಾಜಿ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಾಹೇಬ್ ಅವರನ್ನು ಸನ್ಮಾನಿಸಲಾಯಿತು. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಜಮೀಯ್ಯತ್ತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ ರವರು ಅಧ್ಯಕ್ಷತೆ ವಹಿಸಿದ್ದರು.
ನೃತ್ಯ, ಸಂಗೀತ, ಕವಾಲಿ, ಮೈಮ್ ಶೋ, ದಫ್ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಈ ಸಂದರ್ಭ ಜಮೀಯ್ಯತ್ತುಲ್ ಫಲಾಹ್ ಪ್ರ.ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್, ಮಾಜಿ ಅಧ್ಯಕ್ಷ ಶಭೀ ಅಹ್ಮದ್ ಖಾಝಿ, ಜಂ.ಫ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮುಹಮ್ಮದ್ ಬಪ್ಪಳಿಗೆ, ಜಂ.ಫ.ಮಂಗಳೂರು ನಗರ ಘಟಕದ ಅಧ್ಯಕ್ಷರಾದ ಬಿ.ಎಸ್.ಮುಹಮ್ಮದ್ ಬಶೀರ್, ಕಾರ್ಯದರ್ಶಿ ಇಂತಿಯಾಝ್ ಖತೀಬ್, ಶಾಹುಲ್ ಹಮೀದ್, ಅಬ್ಬೋನ್ ಮದ್ದಡ್ಕ, ಸಂಸ್ಥೆಯ ಮಾಜಿ ಸಂಚಾಲಕರಾದ ಇಬ್ರಾಹಿಂ ಕೋಡಿಜಾಲ್, ಫರ್ವೇಝ್ ಅಲಿ, ಕೆ.ಎಂ.ಕೆ. ಮಂಜನಾಡಿ, ಎಸ್.ಬಿ.ಸಿ ಅಧ್ಯಕ್ಷ ಹಸೈನಾರ್, ಆಡಳಿತಾಧಿಕಾರಿ ಜಮಾಲ್, ಮ್ಯಾನೇಜರ್ ಆದಂ ಬ್ಯಾರಿ, ಪ್ರಾಥಮಿಕ ಮುಖ್ಯ ಶಿಕ್ಷಕಿ ಸಿಂತಿಯ ಲೂಸಿ ಮಸ್ಕರೇನಸ್ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಅಬ್ದುನ್ನಾಸಿರ್ ಕೆ.ಕೆ ಸ್ವಾಗತಿಸಿದರು. ಪ್ರಾಂಶುಪಾಲರಾದ ಅಬೂಬಕ್ಕರ್ ಕೆ. ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕರಾದ ಅಬ್ದುಲ್ ಸಲಾಂ ಹಾಗೂ ರಶ್ಮಿ ಎಸ್. ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಮಿತಾ ಬಿ.ಎನ್. ವಂದಿಸಿದರು.