ಎಸ್ಸೆಸ್ಸೆಫ್ ಪಂಜಿಮೊಗರು ಯುನಿಟ್ ವತಿಯಿಂದ "ಯುನಿಟ್ ಕಾನ್ಫರೆನ್ಸ್"
ಪಂಜಿಮೊಗರು: ಎಸ್ಸೆಸ್ಸೆಫ್ ಪಂಜಿಮೊಗರು ಯುನಿಟ್ ವತಿಯಿಂದ ಸದಸ್ಯತ್ವ ಸಂಭ್ರಮದ ಪ್ರಯುಕ್ತ ಮಂಜೊಟ್ಟಿ ಜಂಕ್ಷನ್ ನಲ್ಲಿ " ಯುನಿಟ್ ಕಾನ್ಫರೆನ್ಸ್ " ನಡೆಯಿತು.
ಕಾರ್ಯಕ್ರಮವನ್ನು KMJ ಪಂಜಿಮೊಗರು ನಾಯಕರಾದ ಹಸನ್ ಮದನಿ ದುಆ ಮೂಲಕ ಚಾಲನೆಗೊಳಿಸಿದರು. ಅಧ್ಯಕ್ಷತೆಯನ್ನು ಯುನಿಟ್ ಅಧ್ಯಕ್ಷರಾದ ಅಬ್ದುಲ್ ಹಕೀಮ್ ವಹಿಸಿದ್ದರು. ಖ್ಯಾತ ವಾಗ್ಮಿಯೂ , ಸಂಘಟನಾ ನೇತಾರರಾದ ಬಶೀರ್ ಮದನಿ ಅಲ್ ಕಾಮಿಲ್ ಕೂಳೂರು ಉದ್ಘಾಟಿಸಿದರು.
ಮುಖ್ಯ ಪ್ರಭಾಷಣಗಾರರಾಗಿ ಎಸ್ಸೆಸ್ಸೆಫ್ ರಾಜ್ಯ ಕ್ಯಾಬಿನೆಟ್ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಭಾಗವಹಿಸಿ, ಎಸ್ಸೆಸ್ಸೆಫ್ ಸಂಘಟನಾ ಪರಂಪರೆ, ಅಗತ್ಯತೆ, ಯುವ ಜನಾಂಗದ ಜವಾಬ್ದಾರಿ ಮತ್ತು ಸತ್ಯ ಪಥದಲ್ಲಿ ಸಾಗುವ ಕುರಿತು ಪ್ರಭಾಷಣಗೈದರು.
ವೇದಿಕೆಯಲ್ಲಿ ಕೂಳೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ಬಾಸ್ ಹಾಜಿ, KMJ ಪಂಜಿಮೊಗರು ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ ಹಕೀಮ್, ತಾಜುಲ್ ಉಲಮಾ ಸುನ್ನೀ ಸೆಂಟರ್ ಶಾಂತಿನಗರ ಅಧ್ಯಕ್ಷರಾದ ಅಹ್ಮದ್ ಬಶೀರ್, SYS ಕಾವೂರು ಸೆಂಟರ್ ಅಧ್ಯಕ್ಷರಾದ ಶೇಕುಂಜಿ ಹಾಜಿ , SYS ಪಂಜಿಮೊಗರು ಯುನಿಟ್ ದಅವಾ ಕಾರ್ಯದರ್ಶಿ ಸಿರಾಜುದ್ದೀನ್ ನಿಝಮಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ದ. ಕ ಜಿಲ್ಲಾ ಸಿಸಿ ಕಾರ್ಯದರ್ಶಿ ಕಾರ್ಯದರ್ಶಿ ನೌಸಿಫ್ ಹುಸೈನ್ ಪಂಜಿಮೊಗರು ನಿರೂಪಿಸಿದರು. ಕಂನ್ವೀನರ್ ಗಳಾಗಿ ಅಶ್ರಫ್ ಮುನ್ನಾ , ನೌರೀನ್ ಮತ್ತು ಬಿಲಾಲ್ ಕಾರ್ಯ ನಿರ್ವಹಿಸಿದರು. ಮೀಡಿಯಾ ವಿಭಾಗದಲ್ಲಿ ನಶೀಮ್ ಸಹಕರಿಸಿದರು.