ಕೂಳೂರು: ಮಾದಕ ದ್ರವ್ಯ ಸಹಿತ ಮೂವರ ಸೆರೆ
ಮಂಗಳೂರು, ಡಿ.18: ಹೊಸ ವರ್ಷ ಆಚರಣೆಯ ಹಿನ್ನಲೆಯಲ್ಲಿ ಮಾರಾಟ ಮಾಡಲು ತಂದಿರಿಸಿದ್ದ ಮಾದಕ ದ್ರವ್ಯ ಸಾಮಗ್ರಿಗಳನ್ನು ಕಾವೂರು ಪೊಲೀಸರು ಬುಧವಾರ ಕೂಳೂರಿನಲ್ಲಿ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಉಡುಪಿ ಉದ್ಯಾವರದ ದೇವರಾಜ್ (37), ಕಿನ್ನಿಮುಲ್ಕಿಯ ಫರ್ವೇಝ್, ಉಡುಪಿ ಬ್ರಹ್ಮಗಿರಿಯ ಶೇಖ್ ತಹೀಂ (20) ಬಂಧಿತ ಆರೋಪಿಗಳಾಗಿದ್ದಾರೆ.
ಇವರಿಂದ 5 ಕೆ.ಜಿ ಗಾಂಜಾ, 100 ಗ್ರಾಂ ಎಂಡಿಎಂ, 7 ಗ್ರಾಂ ಕೊಕೇನ್, 17 ಗ್ರಾಂ ತೂಕದ 35 ಎಂಡಿಎಂಎ, 100 ಗ್ರಾಂ ಚರಸ್, 8 ಗ್ರಾಂ ಹೈಡ್ರೋವಿಡ್ ಗಾಂಜಾ, 3 ಗ್ರಾಂ ಎಲ್ಎಸ್ಡಿ ಸ್ಕ್ರಿಪ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ 9 ಲಕ್ಷ ರೂ. ಆಗಿದೆ. ಅದಲ್ಲದೆ ಕೃತ್ಯಕ್ಕೆ ಬಳಸಿದ್ದ ಚಾಕು, ತೂಕಮಾಪನ, ಪ್ಲಾಸ್ಟಿಕ್ ಕವರ್, ಕಾರು ಮತ್ತು ನೋಂದಣಿ ಸಂಖ್ಯೆಯಿಲ್ಲದ ಸ್ಕೂಟರನ್ನು ಕೂಡ ವಶಪಡಿಸಲಾಗಿದೆ ಎಂದು ಕಾವೂರು ಪೊಲೀಸರು ತಿಳಿಸಿದ್ದಾರೆ.
Next Story