ಪದಾಳ ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ
ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಉಪ್ಪಿನಂಗಡಿ ಹಳೇಗೇಟು, ಕಂಚಿಕಲ್ಲು ನಿವಾಸಿಗಳು ಹೊರೆ ಕಾಣಿಕೆ ನೀಡಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಹೊರಟು ಪದಾಳ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊರೆ ಕಾಣಿಕೆ ಹೋಗುವಾಗ ಇದೇ ದಾರಿಯಲ್ಲಿ ಹಳೇಗೇಟು ಮಸೀದಿ ಬಳಿಯಲ್ಲಿ ಜಮಾಯಿಸಿದ ಸ್ಥಳೀಯರು ತಮ್ಮ ಪಾಲಿನ ಹೊರೆ ಕಾಣಿಕೆ ನೀಡಿ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.
ಹಳೇಗೇಟು ಸಂಶುಲ್ ಉಲಮಾ ಮಸೀದಿ ಸಮಿತಿ ಅಧ್ಯಕ್ಷ ರಶೀದ್, ಪ್ರಧಾನ ಕಾರ್ಯದರ್ಶಿ ಇಸಾಕ್, ಉಪಾಧ್ಯಕ್ಷ ಝಕರಿಯಾ, ಪದಾಧಿಕಾರಿಗಳಾದ ಉಮರಬ್ಬ, ಶಿರಾಜುದ್ದೀನ್ ಕಾರ್ಗಿಲ್, ಯಂಗ್ಮೆನ್ಸ್ ಅಧ್ಯಕ್ಷ ಫಯಾಝ್, ಕಾರ್ಯದರ್ಶಿ ಶಾಫಿಕ್, ಪದಾಧಿಕಾರಿಗಳಾದ ಯಾಸಿರ್, ಅಝೀಂ, ಸಾದಿಕ್, ಸಮೀರ್, ಮಜೀದ್ ಈ ಸಂದರ್ಭ ಇದ್ದರು.
Next Story