ಎಟಿಎಂನಿಂದ ಹಣ ಕಳವಿಗೆ ಯತ್ನ: ದೂರು ದಾಖಲು
ಮಂಗಳೂರು, ಡಿ.18:ನಗರದ ಮಾರ್ನಮಿಕಟ್ಟೆಯ ಎಟಿಎಂನಿಂದ ಹಣ ಕಳವಿಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಡಿ.16ರ ಸಂಜೆ 6:30ರಿಂದ 17ರ ಬೆಳಗ್ಗೆ 8 ಗಂಟೆಯ ಮಧ್ಯೆ ಮಾರ್ನಮಿಕಟ್ಟೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಎಟಿಎಂನ ಮಾನಿಟರ್ ಸ್ಕ್ರೀನ್, ಕೀ ಪ್ಯಾಡ್, ಕಾರ್ಡ್ ರೀಡರ್ ಮೊದಲಾದವುಗಳಿಗೆ ಹಾನಿ ಮಾಡಿ ಹಣ ಕಳವಿಗೆ ಯತ್ನಿಸಿ ದ್ದಾರೆ. ಇದರಿಂದ 1 ಲ.ರೂ. ನಷ್ಟ ಸಂಭವಿಸಿದೆ ಎಂದು ಬ್ಯಾಂಕ್ನ ಮ್ಯಾನೇಜರ್ ಅನುಮೋಹನ್ ಪಾಂಡೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story