ಎನ್ಐಟಿಕೆ ಸುರತ್ಕಲ್: ಬಿ.ಟೆಕ್ ವಿದ್ಯಾರ್ಥಿಗಳ ರಜತ ಮಹೋತ್ಸವ ಆಚರಣೆ
ಮಂಗಳೂರು : ಸುರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಹಿಂದಿನ ಕೆಆರ್ಇಸಿ) 1999ರ ಬಿ.ಟೆಕ್ ಬ್ಯಾಚ್ನ ಹಳೆಯ ವಿದ್ಯಾರ್ಥಿಗಳು ತಮ್ಮ ರಜತ ಮಹೋತ್ಸವವನ್ನು ಡಿ.22ರಿಂದ 24ರವರೆಗೆ ಸುರತ್ಕಲ್ನ ಎನ್ಐಟಿಕೆ ಕ್ಯಾಂಪಸ್ನ ಆಚರಿಸಿಸಲಾಯಿತು. ಔಪಚಾರಿಕ ಕಾರ್ಯಕ್ರಮದಿಂದ ಗುರುತಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ 8 ವಿಭಾಗಗಳ 95ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬ್ಯಾಚ್ನಲ್ಲಿದ್ದ 10 ಮಂದಿ ವಿದ್ಯಾರ್ಥಿನಿಯರ ಪೈಕಿ 5 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಕೆ.ಆರ್.ಕಾಮತ್, ಪ್ರೊ.ಅಪ್ಪುಕುಟ್ಟನ್, ಈಗಿನ ಶಿಕ್ಷಕರಾದ ಪ್ರೊ.ಸುಮನ್ ಡೇವಿಡ್, ಪ್ರೊ.ಎಂ.ಎಸ್.ಭಟ್, ಪ್ರೊ.ಕೆ.ವಿ.ಗಂಗಾಧರನ್ ಅವರನ್ನು ಸನ್ಮಾನಿಸಲಾಯಿತು.
ಬ್ಯಾಚ್ನ ವಿದ್ಯಾರ್ಥಿಗಳಾದ ವಾಸುದೇವ್, ರವೀಂದ್ರ ಗುಜ್ರಾಲ್, ಅರವಿಂದ್ ಶ್ರಾಫ್, ರಾಜಶೇಖರ್ ಜಿ,ಯುವರಾಜ್ ಜಿ ಈ ಸ್ಮರಣೀಯ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಶ್ರಮಿಸಿದ್ದರು. *ಪೋಟೊ: ಎನ್ಐಟಿಕೆ ಸಮಾವೇಶ
Next Story