ಭಾರತೀಯ ರೈಲ್ವೇ ಜೊತೆ ಕೊಂಕಣ ರೈಲ್ವೆ ವಿಲೀನ ಸೂಕ್ತ: ಸಂಸದ ಬ್ರಿಜೇಶ್ ಚೌಟ
ಮಂಗಳೂರು: ಭಾರತೀಯ ರೈಲ್ವೆ ಜೊತೆ ಕೊಂಕಣ ರೈಲ್ವೆ ವಿಲೀನಗೊಳಿಸಲು ರಾಜ್ಯ ಸರಕಾರ ಸಹಕರಿಸಬೇಕು ಎಂದು ಮನವಿ ಮಾಡುವುದಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕೊಂಕಣ ರೈಲ್ವೆ ಸುಮಾರು ರೂ 2,500 ಕೋಟಿ ನಷ್ಟದಲ್ಲಿದೆ. ಮಂಗಳೂರು ಸೇರಿದಂತೆ ಪ್ರದೇಶದ ರೈಲು ಅಭಿವೃದ್ಧಿಗೆ ಕರ್ನಾಟಕ ಸರಕಾರ ಕೊಂಕಣ ರೈಲ್ವೆಯ ಶೇರುಗಳನ್ನು ಭಾರತೀಯ ರೈಲ್ವೆಗೆ ನೀಡುವ ಮೂಲಕ ರೈಲ್ವೆ ಅಭಿವೃದ್ಧಿಗೆ ನೆರವು ನೀಡಲು ರಾಜ್ಯ ಸರ್ಕಾರ ಕ್ಕೆ ಮನವಿ ಮಾಡುವುದಾಗಿ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಬೆಂಗಳೂರು - ಮಂಗಳೂರು ನಡುವೆ ಹೆಚ್ಚು ಸಾಮರ್ಥ್ಯದ ರೈಲು ಮಾರ್ಗ ಗಳ ಅಭಿವೃದ್ಧಿ ಯ ಬಗ್ಗೆ ಕೇಂದ್ರ ಸರಕಾರದ ಮುಂದೆ ಪ್ರಸ್ತಾವನೆಯನ್ನು ಇಟ್ಟಿರುವುದಾಗಿ ಸಂಸದರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿ ಮನೆ ನಿರ್ಮಾಣ ಮಾಡಲು ರಾಜ್ಯ ಸರಕಾರ ಆಸಕ್ತಿ ವಹಿಸಬೇಕು.ಇದುವರೆಗೆ ರಾಜ್ಯ ಸರಕಾರ ಈ ಬಗ್ಗೆ ಆಸಕ್ತಿ ವಹಿಸಿಲ್ಲ.ಈ ಯೋಜನೆಯಿಂದ ಬಡವರಿಗೆ ಮನೆ ನಿರ್ಮಿಸಲು ಒಂದೂವರೆ ಲಕ್ಷ ಆರ್ಥಿಕ ನೆರವು ಕೇಂದ್ರ ಸರಕಾರದಿಂದ ದೊರೆಯುತ್ತದೆ ಎಂದವರು ತಿಳಿಸಿದ್ದಾರೆ.
*ಹಾಸನ - ಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಜೂನ್ ಅಂತ್ಯದೊಳಗೆ ಪೂರ್ಣ ಗೊಳ್ಳಲಿದೆ .ಶಿರಾಡಿ ಘಾಟ್ ನಡುವೆ ಸುರಂಗ ಮಾರ್ಗ ರಚನೆಯ ಪ್ರಸ್ತಾಪದ ಬಗ್ಗೆ ಹಾಗೂ ಕರಾವಳಿ ಭಾಗದ ರೈಲ್ವೆ,ರಸ್ತೆ ವ್ಯವಸ್ಥೆಗಳ ಬಗ್ಗೆ ಹಾಗೂ ಅಡಿಕೆ ಎಲೆ ಚುಕ್ಕಿ ರೋಗ,ಪರ್ಯಾ ಬೆಳೆಗಳ ಸಾಧ್ಯತೆ ಸೇರಿದಂತೆ ಒಟ್ಟು 19 ವಿಷಯಗಳ ಬಗ್ಗೆ ಸಂಸತ್ ನಲ್ಲಿ ಪ್ರಶ್ನೆ ಮಾಡಿರುವುದಾಗಿ ಸಂಸದ ಬೃಜೇಶ್ ಚೌಟ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ತರಬೇತಿ ಅಕಾಡೆಮಿ ಆರಂಭಿಸಲು 150 ಎಕರೆ ಜಾಗ ಗುರುತಿಸಲಾಗಿದೆ ಈ ಬಗ್ಗೆ ಮುಂದಿನ ಯೋಜ ನೆ ಅನುಷ್ಠಾನ ಗೊಳಿಸಲು ಸಚಿವರ ಜೊತೆ ಸಮಾಲೋಚನೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್, ಉಪ ಮೇಯರ್ ಭಾನುಮತಿ, ಬಿಜೆಪಿ ಪದಾಧಿ ಕಾರಿಗಳಾದ ಪ್ರೇಮಾನಂದ ಶೆಟ್ಟಿ, ಮೋಹನ್ ರಾಜ್ , ಸಂಜಯ ಪ್ರಭು, ವಸಂತ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.