ಪಣಂಬೂರು: ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಸಹಿ ಸಂಗ್ರಹ ಅಭಿಯಾನ
ಪಣಂಬೂರು: ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಡ್ರಗ್ಸ್ ಮುಕ್ತ ಮಂಗಳೂರು say no to drugs ಅಭಿಯಾನದಡಿ ಸಹಿ ಸಂಗ್ರಹ ಅಭಿಯಾನ ರವಿವಾರ ಪಣಂಬೂರು ಬೀಚ್‌ನಲ್ಲಿ ನಡೆಯಿತು.
ಅಭಿಯಾನಕ್ಕೆ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಅವರು ಚಾಲನೆ ನೀಡಿದರು. ಡ್ರಗ್ಸ್‌ನಿಂದಾಗುವ ಅಪಾಯಗಳ ಬಗ್ಗೆ ಪಣಂಬೂರು ಪೊಲೀಸರು ಈ ವೇಳೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಪಣಂಬೂರು ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ಮತ್ತು ಸಿಬ್ಬಂದಿ ಅಭಿಯಾನವನ್ನು ನಡೆಸಿಕೊಟ್ಟರು. ಈ ವೇಳೆ ನೂರಾರು ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಿದರು.
Next Story