ಮುಸ್ಲಿಂ ಐಕ್ಯತ ವೇದಿಕೆ ಕುದ್ರೋಳಿ: ನೂತನ ಪದಾಧಿಕಾರಿಗಳ ಆಯ್ಕೆ
ಯಾಸೀನ್ ಕುದ್ರೋಳಿ - ಬಿ. ಅಬೂಬಕರ್
ಮಂಗಳೂರು: ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಇದರ ಮಹಾಸಭೆಯು ಡಿ. 31 ರಂದು ಐಕ್ಯತಾ ವೇದಿಕೆ ಕಚೇರಿಯಲ್ಲಿ ಯಾಸೀನ್ ಕುದ್ರೋಳಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಅಧ್ಯಕ್ಷರಾಗಿ ಯಾಸೀನ್ ಕುದ್ರೋಳಿ ಪ್ರಧಾನ ಕಾರ್ಯದರ್ಶಿಯಾಗಿ ಬಿ ಅಬೂಬಕರ್ ಹಾಗೂ ಕೋಶಾಧಿಕಾರಿಯಾಗಿ ಮಕ್ಬೂಲ್ ಜಾಮಿಯಾ ರವರು ಅವಿರೋಧ ಪುನರಾಯ್ಕೆಯಾದರು.
ಅದೇ ರೀತಿ ಸಂಚಾಲಕರಾಗಿ ಅಝೀಝ್ ಕುದ್ರೋಳಿ, ಉಪಾಧ್ಯಕ್ಷರುಗಳಾಗಿ ಸಂಸುದ್ದೀನ್ ಎಚ್ ಬಿ ಟಿ, ಮಾಜಿ ಮೇಯರ್ ಕೆ ಆಶ್ರಫ್, ಅಶ್ರಫ್ ಮಾಸ್ ಕಲೀಲ್ ಬಾಯಿ ಜಾಮಿಯಾ, ಹಾರೀಸ್ ಕುದ್ರೋಳಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಮಾಕ್ಬೂಲ್ ಜಾಮಿಯಾ, ಸಂಘಟನಾ ಕಾರ್ಯದರ್ಶಿಯಾಗಿ ಮುಝೈರ್ ಕುದ್ರೋಳಿ ಹಾಗೂ ಮಾದ್ಯಮ ಕಾರ್ಯದರ್ಶಿ ಯಾಗಿ ಯನ್ ಕೆ ಅಬೂಬಕ್ಕರ್ ಮತ್ತು ವಹಾಬ್ ಕುದ್ರೋಳಿ ಆಯ್ಕೆ ಯಾದರು. ಸಮಿತಿಯ ಸದಸ್ಯರಾಗಿ ಮುಸ್ತಾಕ್ ಕುದ್ರೋಳಿ, ಇಸ್ಮಾಯಿಲ್ ಬಿ ಎ, ಲತೀಫ್ ಕ್ರಿಸ್ಟಲ್, ಅಶ್ರಫ್ ಕಿನಾರ, ಇಕ್ಬಾಲ್ ಕುದ್ರೋಳಿ ಲತೀಫ್ ಕೆ ಕೆ ಆಯ್ಕೆಯಾದರು.
Next Story