ಕೆಎಂಜೆ, ಎಸ್ ವೈ ಎಸ್ ವತಿಯಿಂದ ಯುನಿಟ್ ಸಮ್ಮೇಳನ, ಚೆಕ್ ವಿತರಣೆ
ಉಳ್ಳಾಲ: ಕರ್ನಾಟಕ ಮುಸ್ಲಿಂ ಜಮಾಅತ್ ಎಸ್ ವೈ ಎಸ್ ತೊಕ್ಕೋಟ್ಟು ಯುನಿಟ್ ನ ವಾರ್ಷಿಕ ಮಹರತುಲ್ ಬದ್ರಿಯಾ ಹಾಗೂ ಯುನಿಟ್ ಸಮ್ಮೇಳನವು ದಾರಂದಬಾಗಿಲು ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆಯಿತು.
ಕಾರ್ಯಕ್ರಮ ದ ನೇತೃತ್ವ ವಹಿಸಿದ್ದ ಬಿ.ಎಂ. ರಶೀದ್ ಸಅದಿ ಬೋಳಿಯಾರ್ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಈ ಸಂದರ್ಭ ರೋಗಿಯ ಚಿಕಿತ್ಸೆ ವೆಚ್ಛ ಕ್ಕಾಗಿ 30 ಸಾವಿರ ಚೆಕ್ ವಿತರಣೆ ಮಾಡಲಾಯಿತು. ಬದ್ರಿಯಾ ಜುಮಾ ಮಸೀದಿ ಖತೀಬ್ ಹಸನ್ ಜಾಬಿರ್ ಫಾಳಿಲ್ ದುಆ ನೆರವೇರಿಸಿದರು.
ಈ ಸಂದರ್ಭ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಮುಂಡೋಲಿ, ಬಶೀರ್ ಪಿಲಾರ್, ಖಾದರ್ ದಾರಂದಬಾಗಿಲು ಉಪಸ್ಥಿತರಿದ್ದರು.
Next Story