ಮಂಜನಾಡಿ: ಸತ್ಪದ ಸಂಕಲ್ಪ-ಸದಸ್ಯತ್ವ ಸಡಗರ
ಮಂಗಳೂರು, ಜ.3: ಕರ್ನಾಟಕ ರಾಜ್ಯ ಮುಸ್ಲಿಂ ಜಮಾತಿನ ಸದಸ್ಯತ್ವ ಸಡಗರದ ಪ್ರಯುಕ್ತ ಮಂಜನಾಡಿ ಮುಸ್ಲಿಂ ಜಮಾಅತ್ ಸೆಂಟರ್‌ನಲ್ಲಿ ಸದಸ್ಯತ್ವ ಸಂಕಲ್ಪದಿನವು ಶುಕ್ರವಾರ ನಡೆಯಿತು.
ಸೆಂಟರ್ ಅಧ್ಯಕ್ಷ ಅಬ್ದುಲ್ ಕರೀಂ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಜಮಾತ್ ಮುಡಿಪು ವಲಯ ಉಪಾಧ್ಯಕ್ಷ ಕೆಎಂಕೆ ಮಂಜನಾಡಿ ಅವರು ಯುನಿಟ್ ಸದಸ್ಯತ್ವ ಸ್ವೀಕರಿಸುವುದರ ಮೂಲಕ ಸತ್ಪಸಂಕಲ್ಪಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಯೂನಿಟ್ ಪ್ರಧಾನ ಕಾರ್ಯದರ್ಶಿ ಆಲಿ ಪಾರೆ, ಕೋಶಾಧಿಕಾರಿ ಅಹ್ಮದ್, ನಿಕಟಪೂರ್ವ ಅಧ್ಯಕ್ಷ ಹುಸೇನ್, ಇಸ್ಮಾಯಿಲ್, ಮೊಹಿದಿನ್,ಪುತ್ತುಬಾವ ಮತ್ತಿತರರು ಉಪಸ್ಥಿತರಿದ್ದರು.
Next Story