ಚಾರ್ಮಾಡಿ: ನದಿಗೆ ತ್ಯಾಜ್ಯ ಎಸೆದ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
ಬೆಳ್ತಂಗಡಿ; ಚಾರ್ಮಾಡಿ ಮೃತ್ಯುಂಜಯ ನದಿಯಲ್ಲಿ ದನದ ಮಾಂಸದ ತ್ಯಾಜ್ಯಗಳನ್ನು ಎಸೆದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಗಳನ್ನು ಚಾರ್ಮಾಡಿ ಗ್ರಾಮದ ಕತ್ರಿಗುಡ್ಡೆ ನಿವಾಸಿ ಇರ್ಷಾದ್ (28) ಹಾಗೂ ಕುವೆಟ್ಟು ಗ್ರಾಮದ ಸುನ್ನತ್ ಕೆರೆ ನಿವಾಸಿ ಅಜ್ಮಲ್ (30) ಎಂದು ಗುರುತಿಸಲಾಗಿದೆ.
ಧರ್ಮಸ್ಥಳ ಠಾಣೆ ವ್ಯಾಪ್ತಿಯ ಚಾರ್ಮಾಡಿ ಗ್ರಾಮದ ಅನ್ನಾರು ಎಂಬಲ್ಲಿ ಜ 17ರಂದು ಸೇತುವೆಯ ಕೆಳ ಭಾಗದಲ್ಲಿ ಮೃತ್ಯುಂಜಯ ನದಿಯ ಬದಿಯಲ್ಲಿ ಹತ್ಯೆಗೈದ ಜಾನುವಾರುಗಳ ತಲೆ ಹಾಗೂ ಇತರೆ ತ್ಯಾಜ್ಯಗಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಎಸೆದು ಹೋಗಿದ್ದರು ಎಂದು ದೂರಲಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೋಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Next Story