ಉದ್ಯೋಗ ಕೊಡಿಸುವುದಾಗಿ ವಂಚನೆ: ಪ್ರಕರಣ ದಾಖಲು
ಮಂಗಳೂರು, ಜ.7: ಇಸ್ರೇಲ್‌ನಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ 7.50 ಲ.ರೂ.ಗಳನ್ನು ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ವ್ಯಕ್ತಿಯೋರ್ವರಿಗೆ ಎರಡು ವರ್ಷಗಳ ಹಿಂದೆ ಜೆರಾಲ್ಡ್ ಫ್ರಾನ್ಸಿಸ್ ಡಿಸೋಜ ಎಂಬಾತ ಇಸ್ರೇಲ್ ದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿದ್ದ. ಅದರಂತೆ ಜೆರಾಲ್ಡ್‌ಗೆ 5.50 ಲ.ರೂ. ಹಾಗೂ ಆತನ ಸಹಪಾಠಿ ಸಯ್ಯದ್ ಫರಾಝ್ ಅಹ್ಮದ್‌ನಿಗೆ 2 ಲ.ರೂ. ಪಾವತಿಸಲಾಗಿತ್ತು. ಆದರೆ ಇದುವರೆಗೂ ವೀಸಾ ಮಾಡಿಕೊಟ್ಟಿಲ್ಲ. ಹಣವನ್ನು ವಾಪಸ್ ಕೂಡ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story