ಮಂಗಳೂರಿಗೆ ಸಿದ್ದರಾಮಯ್ಯ ಭೇಟಿ: ಕಾರ್ಯಕರ್ತರಿಂದ ಹೂಮಳೆ
► ಉಳ್ಳಾಲ ನರಿಂಗಾನ ಕಂಬಳೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸಿಎಂ
ಮಂಗಳೂರು: ನರಿಂಗಾನ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಶನಿವಾರ ಸಂಜೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೂವಿನ ಮಳೆಗೆರದು ಸಂಭ್ರಮಿಸಿದರು.
ಸಿದ್ದರಾಮಯ್ಯ ಅವರು ಕಾರಿನಲ್ಲಿ ಆಗಮಿಸುತ್ತಿದ್ದಂತೆ ಅವರ ಕಾರಿನ ಮೇಲೆ ಅಭಿಮಾನಿಗಳು ಹೂಮಳೆಗೆರೆದು ಸ್ವಾಗತಿಸಿದರು.
ಮುಖ್ಯಮಂತ್ರಿ ವಾಹನದಿಂದ ಇಳಿದು ಅಭಿಮಾನಿಗಳತ್ತ ಕೈ ಬೀಸಿದರು. ಈ ವೇಳೆ ಅವರಿಗೆ ಹೂವಿನ ಹಾರಾರ್ಪಣೆಗೈದು ಅಭಿನಂದಿಸಿದರು.
Next Story