ತುಂಬೆ| ರಕ್ಷಕ-ಶಿಕ್ಷಕ, ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ, ಸನ್ಮಾನ ಕಾರ್ಯಕ್ರಮ
ಬಂಟ್ವಾಳ : ತುಂಬೆ ಪದವಿ ಪೂರ್ವ ಕಾಲೇಜಿನ ರಕ್ಷಕ-ಶಿಕ್ಷಕ, ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ ಹಾಗೂ ಪಂದ್ಯಾಟವು ತುಂಬೆಯ ಅಹ್ಮದ್ ಹಾಜಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತ ಡಿ.ಎಸ್. ಗಟ್ಟಿ ಸಮಾರಂಭವನ್ನು ಉದ್ಘಾಟಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಫ್ ಉಮ್ಮರ್ ಫಾರೂಕ್, ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಸದಸ್ಯ ಝಹೂರ್ ಅಹ್ಮದ್, ಮಾಜಿ ಅಧ್ಯಕ್ಷರಾದ ಪ್ರವೀಣ್ ಬಿ. ತುಂಬೆ , ಮಹಮ್ಮದ್ ವಳವೂರು, ತುಂಬೆ ಮೊಹುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಇಮ್ಮಿಯಾಝ್ ಅಲ್ಪಾ, ಭಾಗವಹಿದ್ದರು.
ರಕ್ಷಕ - ಶಿಕ್ಷಕ ಸಂಘದ ಉಪಾಧ್ಯಕ್ಷೆ ಮೋಹಿನಿ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಮ್ಯಾಕ್ಸಿಂ ಕುವೆಲ್ಲೋ, ಗಫೂರ್ ಮುಖ್ಯೋಪಾಧ್ಯಾಯಿನಿ ವಿದ್ಯಾ.ಕೆ. ಶಾಹಿದ್ ತುಂಬೆ, ರಫೀಕ್ ಪೇರಿಮಾರ್, ಅರ್ಜುನ್ ಕೆ. ಪೂಂಜಾ, ಬದ್ರುದ್ದೀನ್ ಫರಂಗಿಪೇಟೆ, ಶಾಫಿ ಅಮೆಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಇದೇ ವೇಳೆ ರಾಷ್ಟ್ರಮಟ್ಟದ ತ್ರೋಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದ ಖಾದರ್ ಪರ್ವೇಝ್. ಪ.ಪೂ.ಕಾಲೇಜಿನ ಶಟ್ಸ್ ಬ್ಯಾಡ್‌ಮಿಂಟನ್ ನಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ ವಾಸುಕಿ ಅಭಯ ಶರ್ಮ, ಫುಟ್‌ಬಾಲ್ ಪಂದ್ಯಾಟದಲ್ಲಿ ರಾಜ್ಯ ಮಟ್ಟದ ಆಟಗಾರ ಮೊಹಮ್ಮದ್ ಹಸನ್ ಮೆಹರಾನ್, ವಿಕಲತೆ ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಭವಿಷ್ ಇವರುಗಳನ್ನು ಅಭಿನಂದಿಸಲಾಯಿತು.
ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಆಳ್ವ ಕೆ.ಎನ್., ಹಾಗೂ ಕಲಾವಿದ ಸದಾಶಿವ ಡಿ. ತುಂಬೆ, ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್ ರೈ, ಸಾಯಿರಾಮ್ ಜೆ.ನಾಯಕ್.ಕೆ, ಮೋಲಿ ಎಡ್ಡಾ ಗೊನ್ಸಾಲ್ವಿಸ್, ಶಿಕ್ಷಕೇತರ ಸಿಬ್ಬಂದಿ ಡೇಸಿ ವೇಗಸ್, ಹಿರಿಯ ವಿದ್ಯಾರ್ಥಿ ಹಾಗೂ ಕ್ರೀಡಾಕೂಟದ ಪ್ರಾಯೋಜಕ ಫರ್ವೀಝ್ ವಳವೂರು ಅವರನ್ನು ಗೌರವಿಸಲಾಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹ್ಮದ್ ವಳವೂರು ಸ್ವಾಗತಿಸಿ, ಬಿ. ಅಬ್ದುಲ್ ಕಬೀರ್ ವಂದಿಸಿದರು. ಜಗದೀಶ್ ರೈ ಹಾಗೂ ಸಾಯಿರಾಮ್ ಜೆ.ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.