ಬಿಕರ್ನಕಟ್ಟೆಯ ಬಾಲ ಯೇಸು ದೇವಾಲಯದ ಮಹೋತ್ಸವ: ಸ್ಪೀಕರ್ ಯು.ಟಿ.ಖಾದರ್ ಭೇಟಿ
ಮಂಗಳೂರು: ಬಿಕರ್ನಕಟ್ಟೆಯ ಬಾಲ ಯೇಸುವಿನ ದೇವಾಲಯದ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿದರು.
ಈ ಸಂದರ್ಭ ಯು.ಟಿ. ಖಾದರ್ ಅವರು ಸ್ಥಳೀಯರೊಂದಿಗೆ ಸಂವಾದ ನಡೆಸಿದರಲ್ಲದೆ, ನಂಬಿಕೆ, ಐಕ್ಯತೆ ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ಮಾತನಾಡಿದರು.
ಸ್ಪೀಕರ್ ಅವರನ್ನು ಕರ್ನಾಟಕ ಗೋವಾ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾದ ವಂ. ಸಿಲ್ವೆಸ್ಟರ್ ಡಿಸೋಜಾ ಸ್ವಾಗತಿಸಿದರು. ಪುಣ್ಯಕ್ಷೇತ್ರದ ನಿರ್ದೇಶಕರಾದ ವಂ. ಸ್ಟೀಫನ್ ಪಿರೇರಾ ಬಾಲ ಯೇಸುವಿನ ಪ್ರತಿಮೆಯನ್ನು ಕಾಣಿಕೆಯಾಗಿ ನೀಡಿದರು. ತದನಂತರ ಮಹೋತ್ಸವದ ಭೋಜನ ಸ್ವೀಕರಿಸಿ ಸಭಾಧ್ಯಕ್ಷರು ನಿರ್ಗಮಿಸಿದರು
ಈ ಭೇಟಿಯ ವೇಳೆ ಸಂತ ಜೋಸೆಫರ ಮಠಾಧಿಪತಿರಾದ ವಂ. ಮೆಲ್ವಿನ್ ಡಿಕುನ್ಹಾ, ಪ್ರಾಂತ್ಯದ ಕೌನ್ಸಿಲರ್ ವಂ. ಪ್ರಕಾಶ್ ಡಿಕುನ್ಹಾ ಹಾಗೂ ವಂ. ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಹಾಜರಿದ್ದರು.
Next Story