ಇಸ್ಲಾಹಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಬಹುಭಾಷಾ ಕವಿಗೋಷ್ಠಿ
ಉಳ್ಳಾಲ: ಇಲ್ಲಿನ ಇಸ್ಲಾಹಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಬಹುಭಾಷಾ ಕವಿಗೋಷ್ಠಿ ನಡೆಯಿತು. ಪಿ.ಎ. ಕಾಲೇಜಿನ ಉಪನ್ಯಾಸಕಿ ಸಾರಾ ಮಷ್ಕುರುನ್ನಿಸಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಾಹಿತ್ಯದ ಕುರಿತು ಮಾತನಾಡಿ ಕವನ ವಾಚಿಸಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಅಬ್ದುಲ್ ರಝಾಕ್, ಕಾರ್ಯದರ್ಶಿ ಅಹ್ಮದ್ ಕುಂಞಿ ಮಾಸ್ಟರ್ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಫಯಾಝ್ ಎ.ಎಂ. ಕವನ ವಾಚಿಸಿದರು. ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಸುಮಂಗಲ ಶೆಟ್ಟಿ ಬರವಣಿಗೆಯ ಶಕ್ತಿಯ ಬಗ್ಗೆ ವಿವರಿಸಿದರು.
ಕನ್ನಡ, ಹಿಂದಿ, ಇಂಗ್ಲಿಷ್, ಅರಬಿಕ್ ಸಹಿತ ನಾನಾ ಭಾಷೆಗಳಲ್ಲಿ ವಿದ್ಯಾರ್ಥಿಗಳು ಕವನ ವಾಚಿಸಿದರು. ವ್ಯವಸ್ಥಾಪಕಿ ಅನಿಲಾ ಶೆಟ್ಟಿ , ಶಾಲೆಯ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಉಪಸ್ಥಿತರಿದ್ದರು.
ಉಪನ್ಯಾಸಕಿಯರಾದ ರಕ್ಷಿತಾ ವಿನಯ್ ಸ್ವಾಗತಿಸಿದರು. ಕವಿತಾ ಯು.ಕೆ. ವಂದಿಸಿದರು. ಮುಹಮ್ಮದ್ ಮೂನಿಸ್ ಅಹ್ಸನ್ ಕಾರ್ಯಕ್ರಮ ನಿರೂಪಿಸಿದರು.
Next Story