ಹಳೆಯಂಗಡಿ: ಫಾರಂ ಫಾರ್ ಎಜುಕೇಷನ್ ವತಿಯಿಂದ ಶೈಕ್ಷಣಿಕ ಕಾರ್ಯಾಗಾರ
ಹಳೆಯಂಗಡಿ: ಫಾರಂ ಫಾರ್ ಎಜುಕೇಷನ್ ಹಳೆಯಂಗಡಿ ಇದರ ವತಿಯಿಂದ ಇನ್ಫೊಮೇಟ್ ಫೌಂಡೇಶನ್ (ರಿ.) ಕರ್ನಾಟಕ ಇದರ ಸಹಯೋಗದೊಂದಿಗೆ ಎಸ್ಸೆಸ್ಸೆಲ್ಸಿ, ಪಿಯು ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಕಾರ್ಯಾಗಾರ ಸಾಗ್ ಮಸ್ಜಿದ್ ವಠಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಫಾರಂ ಫಾರ್ ಎಜುಕೇಷನ್ ಹಳೆಯಂಗಡಿ ಇದರ ಚೆಯರ್ ಮೇನ್ ಅನ್ವರ್ ಹುಸೈನ್ ತೈತೋಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇನ್ಫೋಮೇಟ್ ಫೌಂಡೇಶನ್ ಹಾಗೂ ಮುಡಿಪು ಅನುಗ್ರಹ ಕಾಲೇಜಿನ ನಿರ್ದೇಶಕ ಖಾದರ್ ನಾವೂರು, ಆಪ್ತ ಸಮಾಲೋಚಕಿ ಸಲೀಲ ಕಡಂಬು, ಇನ್ಫೋಮೇಟ್ ಫೌಂಡೇಶನ್ ನ ಹಿರಿಯ ತರಬೇತುದಾರ ಮುಹಮ್ಮದ್ ತೌಸಿಫ್ ಕಕ್ಕಿಂಜೆ, ಹಿದಾಯ ಫೌಂಡೇಶನ್ ಮಂಗಳೂರು ಇದರ ಯೂತ್ ವಿಂಗ್ ನ ಸ್ಕಿಲ್ ಡೆವಲಪ್ ಮೆಂಟ್ ಉಸ್ತುವಾರಿ ಹರ್ಫಾಝ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಭವಿಷ್ಯದ ಕನಸು, ಪರೀಕ್ಷೆಯನ್ನು ಎದುರಿಸುವುದು ಹೇಗೆ? ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ - ಮುಂದೇನು? ವಿಷಯಗಳಲ್ಲಿ ತರಗತಿಗಳನ್ನು ಆಯೋಜಿಸಲಾಗಿತ್ತು.
ಈ ವೇಳೆ ಫಾರಂ ಫಾರ್ ಎಜುಕೇಷನ್ ಸದಸ್ಯರಾದ ಅಕ್ಬರ್ ಬೊಳ್ಳೂರು, ಹಫೀಝ್ ಸಾಗ್ ಹಾಜರಿದ್ದರು. ಫಾರಂ ಫಾರ್ ಎಜುಕೇಷನ್ ಇದರ ಕಾರ್ಯದರ್ಶಿ ಝಿಯಾವುಲ್ ಹಖ್ ಪಟೇಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.