ಕುದ್ರೋಳಿ ಮಖಾಂ ಉರೂಸ್ ಪ್ರಯುಕ್ತ ಅಜ್ಮೀರ್ ಮೌಲಿದ್

ಮಂಗಳೂರು: ಕುದ್ರೋಳಿಯ ಹಝ್ರತ್ ಸೈಯದ್ ಖಾದಿರ್ ಶಾ ವಲಿಯುಲ್ಲಾಹಿ (ಖ.) ದರ್ಗಾ ಶರೀಫ್ ನಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ಜರುಗುವ ಉರೂಸ್ ಕಾರ್ಯಕ್ರಮ ಜ.31ರಿಂದ ಫೆಬ್ರವರಿ 8ರ ತನಕ ನಡೆಯಲಿದೆ. ಇದರ ಯಶಸ್ಸಿಗಾಗಿ ಜ.30ರಂದು ದರ್ಗಾ ಅಧ್ಯಕ್ಷ ಮುಸ್ತಾಕ್ ಅಧ್ಯಕ್ಷತೆಯಲ್ಲಿ ನಡುಪಳ್ಳಿ ಜುಮಾ ಮಸೀದಿಯ ಖತೀಬ್ ಕೆ.ಎಸ್. ರಿಯಾಝ್ ಪೈಝಿ ಕಕ್ಕಿಂಜೆ ನೇತೃತ್ವದಲ್ಲಿ ಅಜ್ಮೀರ್ ಮೌಲಿದ್ ನಡೆಯಿತು.
ನಡುಪಳ್ಳಿ ಮುಅದ್ದಿನ್ ಸಿರಾಜ್ ಫೈಝಿ, ದರ್ಗಾ ಉಪಾಧ್ಯಕ್ಷ ಅಲ್ತಾಫ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ, ಕೋಶಾಧಿಕಾರಿ ಅಬ್ದುಲ್ಲ ಕೆ.ಎಚ್.ಬಿ., ಕಾರ್ಯದರ್ಶಿಗಳಾದ ನವಾಝ್, ಆಸಿಫ್, ಸದಸ್ಯರಾದ ಹಾಜಿ ಕಬೀರ್ ಅಬ್ದುಲ್ ಗಫೂರ್, ಎನ್.ಕೆ.ಅಬೂಬಕರ್, ಖಲೀಲ್, ಯೂಸುಫ್, ಮುಸ್ತಫ, ಅಮೀರ್, ಬಶೀರ್, ಮುಸ್ತಫ ಹಾಗೂ ಸ್ಥಳೀಯ ಜಮಾಅತ್ ಬಾಂಧವರು ಉಪಸ್ಥಿತರಿದ್ದರು.
Next Story