ಕುದ್ರೋಳಿ ಮಖಾಂ ಉರೂಸ್ ಗೆ ಚಾಲನೆ

ಮಂಗಳೂರು: ಕುದ್ರೋಳಿಯ ಹಝ್ರತ್ ಸೈಯದ್ ಖಾದಿರ್ ಷಾ ವಲಿಯುಲ್ಲಾಹಿ (ಖ) ದರ್ಗಾ ಶರೀಫ್ ನಲ್ಲಿ ಪ್ರತೀ ಎರಡು ವರ್ಷ ಕ್ಕೊಮ್ಮೆ ನಡೆಯುವ ಉರೂಸ್ ಕಾರ್ಯಕ್ರಮ ಜ.31ರಂದು ಇಶಾ ನಮಾಝ್ ಬಳಿಕ ಮೌಲಿದ್ ಹಾಗೂ ರಿಫಾಯಿ ರಾತೀಬ್ ಮಜ್ಲಿಸ್ ನೊಂದಿಗೆ ಆರಂಭಗೊಂಡಿತು.
ದರ್ಗಾ ಸಮಿತಿಯ ಅಧ್ಯಕ್ಷ ಮುಸ್ತಾಕ್ ಅಧ್ಯಕ್ಷ ತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮೊಹ್ದಿನ್ ಪಳ್ಳಿ ಖತೀಬ್ ಕೆಕೆ ಮುಹಮ್ಮದ್ ಬಾಖವಿ, ಕಂಡತ್ ಪಳ್ಳಿ ಖತೀಬ್ ಪಿಎ ಮುಹಮ್ಮದ್ ರಫೀಕ್ ಮದನಿ ಕಾಮಿಲ್ ಸಖಾಫಿ, ನಡುಪಳ್ಳಿ ಸದರ್ ಅಲಿ ಫೈಝಿ, ಮುಹಝ್ಝಿನ್ ಸಿರಾಜ್ ಪೈಝಿ, ಮೌಲಿದ್ ಆಲಾಪಣೆ ಅಶ್ರೀಫ್ ಸಅದಿ ಅಲ್ ಮಲ್ಹರಿ, ನಡುಪಳ್ಳಿ ಮಸೀದಿ ಅಧ್ಯಾಪಕರು, ದರ್ಗಾ ಸಮಿತಿಯ ಸದಸ್ಯರು, ನಡುಪಳ್ಳಿ ಜಮಾಅತ್ ಬಾಂಧವರು ಭಾಗವಹಿಸಿದ್ದರು.

ರಿಫಾಯಿ ರಾತೀಬ್ ನೇತೃತ್ವವವನ್ನು ಸಯ್ಯಿದ್ ಹಾಶಿಂ ಆಟಕ್ಕೋಯ ತಂಙಳ್ ನಿಲಾಮಿಯ್ಯಿ ಕವರಟ್ಟಿ ಲಕ್ಷದೀಪ ವಹಿಸಿ ದುಆ ನೆರವೇರಿಸಿದರು.
ಮಗ್ರಿಬ್ ನಮಾಝ್ ಸಂದರ್ಭದಲ್ಲಿ ಬಂದರ್ ಮೌಲಾ ತಂಡದಿಂದ ಚಾದರ ಅರ್ಪಿಸಿ ಪ್ರಾರ್ಥನೆ ನಡೆಸಲಾಯಿತು.

Next Story