ಫರಂಗಿಪೇಟೆ: ರಿಕ್ಷಾ ಪಾರ್ಕ್ ಚಾಲಕ-ಮಾಲಕರ ಸಂಘದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ಫರಂಗಿಪೇಟೆ, ಫೆ.18: ಇಲ್ಲಿನ ನಂ.1 ರಿಕ್ಷಾ ಪಾರ್ಕ್ ಚಾಲಕ ಮಾಲಕರ ಸಂಘ ಹಾಗೂ ಪುದು ಪ್ರಾಥಮಿಕ ಆರೋಗ್ಯ ಕೇಂದ್ರ, ವೃದ್ದಾಶ್ರಮ ಮತ್ತು ಅನಾಥಶ್ರಮ ಸೇವಾ ಸಂಸ್ಥೆ ಮಂಗಳೂರು ಇದರ ವತಯಿಂದ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆಯ ಚರ್ಮ ರೋಗ ವಿಭಾಗದ ವೈದ್ಯರು ಮತ್ತು ಆಪ್ತ ಸಮಾಲೋಚಕರ ಸಹಬಾಗಿತ್ವದಲ್ಲಿ ಆರೋಗ್ಯ ಮತ್ತು ರಕ್ತ ತಪಾಸಣೆ ಶಿಬಿರ ಮಂಗಳವಾರ ಫರಂಗಿಪೇಟೆ ರಿಕ್ಷಾ ಪಾರ್ಕಿಂಗ್ ನಲ್ಲಿ ನಡೆಯಿತು.
ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಫಾರೂಕು ಸುಜೀರ್ ಶಿಬಿರ ಉದ್ಘಾಟಿಸಿದರು. ಸಂಘದ ಗೌರವಾಧ್ಯಕ್ಷ ಜಾಫರ್ ಸುಜೀರ್, ಉಪಾಧ್ಯಕ್ಷ ಇನ್ಸಾದ್ ಅಮೆಮ್ಮಾರ್, ಝುಬೈರ್ ಅಮೆಮ್ಮಾರ್, ಪ್ರಧಾನ ಕಾರ್ಯದರ್ಶಿ ಖಾದರ್ ಅಮೆಮ್ಮಾರ್, ಜೊತೆ ಕಾರ್ಯದರ್ಶಿ ರಮ್ಲಾನ್ ಚಾಬು, ಕೋಶಾಧಿಕಾರಿ ಆಶ್ರಫ್ ಮಲ್ಲಿ, ಸದಸ್ಯರಾದ ಸಾದಿಕ್ ಮಾರಿಪಳ್ಳ, ನವಾಝ್ ಅಮೆಮ್ಮಾರ್, ಚಂದಪ್ಪ ಕಡೆಗೋಳಿ, ಆರಿಫ್ ಪೇರಿಮಾರ್, ಹನೀಫ್ ಕಾನ, ಇನ್ವಾಝ್ ಕುಂಪನಮಜಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story