ಸಾಹಿತಿಗಳಿಗೆ ಮುಕ್ತವಾಗಿ ಬರೆಯಲಾಗದ ಭೀತಿಯ ವಾತಾವರಣವಿದೆ: ಬಿ.ಆರ್.ಲಕ್ಷ್ಮಣ ರಾವ್
ದ.ಕ. ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮಂಗಳೂರು, (ಬಿ.ಎಂ.ಇದಿನಬ್ಬ) ವೇದಿಕೆ, ಫೆ.21: ಸಾಹಿತಿ ಮುಕ್ತವಾಗಿ ಬರೆಯಲು ಸಾಧ್ಯ ವಾಗಬೇಕು. ಆದರೆ ಇಂದು ಅದು ಸಾಧ್ಯವಾಗದ ಭೀತಿಯ ವಾತಾವರಣ ಇದೆ. ಅದಕ್ಕೆ ಮುಖ್ಯ ಕಾರಣ ಹೊಸದಾಗಿ ಬಂದಿರುವ ಸಾಮಾಜಿಕ ಮಾಧ್ಯಮಗಳು ಎಂದು ಹಿರಿಯ ಸಾಹಿತಿ ಬಿ.ಆರ್.ಲಕ್ಷ್ಮಣ ರಾವ್ ಹೇಳಿದ್ದಾರೆ.
ಅವರು ಕೊಣಾ ಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿರುವ ಎರಡು ದಿನಗಳ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ 27ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಲ್ಲರನ್ನೂ ಒಳಗೊಳ್ಳುವುದು, ಬಹುತ್ವಕ್ಕೆ ಮನ್ನಣೆ ಸಾಹಿತ್ಯ, ಅಂತರಂಗದ ಬದುಕಿಗೆ ಮನಸ್ಸಿನ, ಬುದ್ದಿಯ ಹಸಿವಿಗೆ ಸಾಹಿತ್ಯ ಮುಖ್ಯ. ಸಾಹಿತ್ಯದಿಂದ ಲಾಭ ಏನೆಂದರೆ ಈ ಜಗತ್ತನ್ನು ಸ್ಪಷ್ಟವಾಗಿ ನೋಡಲು ನಮಗೆ ಕನ್ನಡಕ ಇರುವಂತೆ ಸಾಹಿತ್ಯ ನಮ್ಮೊಂದಿಗೆ ಇದೆ. ಸಾಹಿತ್ಯದಿಂದ ವ್ಯವಹಾರಿಕ ಲಾಭ ಕಡಿಮೆ ಆಂತರಿಕ ಸಂತೋಷ ಹೆಚ್ಚು. ಸಾಹಿತ್ಯ ಮುದ್ರಣ ಪ್ರಸಾರಕ್ಕೆ ಹೆಚ್ಚು ಪ್ರೋತ್ಸಾಹ ಕಡಿಮೆ ಈ ಎಲ್ಲಾ ಕಾರ್ಯಕ್ರಮ ಗಳ ಬಗ್ಗೆ ಚರ್ಚೆಯಾಗಬೇಕಾಗಿದೆ ಎಂದು ಲಕ್ಷ್ಮಣ ರಾವ್ ತಿಳಿಸಿದ್ದಾರೆ.
ಹಿರಿಯ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.