ಸುಖಾಂತ್ಯಗೊಂಡ ದಿಗಂತ್ ನಾಪತ್ತೆ ಪ್ರಕರಣ: ಪೊಲೀಸ್ ಇಲಾಖೆಗೆ ಎಸ್ ಡಿಪಿಐ ಅಭಿನಂದನೆ

ದಿಗಂತ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ಆತಂಕಕ್ಕೀಡು ಮಾಡಿದ್ದ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ಇದೀಗ ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ದಿಗಂತ್ ಪತ್ತೆಯಾಗುವುದರೊಂದಿಗೆ ಸುಖಾಂತ್ಯಗೊಂಡಿದೆ. ದಿಗಂತ್ ಪತ್ತೆಗಾಗಿ ಶ್ರಮಸಿದ ಹಾಗೂ ಜನತೆಯಲ್ಲಿದ್ದ ಸಂಶಯವನ್ನು ದೂರ ಮಾಡಿದ ದ.ಕ. ಜಿಲ್ಲಾ ಎಸ್ಪಿ ಯತೀಶ್ ನೇತೃತ್ವದ ಪೋಲಿಸರನ್ನು, ಇಲಾಖೆಯೊಂದಿಗೆ ಸಹಕರಿಸಿದ ಫರಂಗಿಪೇಟೆಯ ನಾಗರಿಕರನ್ನು ಎಸ್ ಡಿಪಿಐ ಮಂಗಳೂರು ನಗರ ಸಮಿತಿ ಅಭಿನಂದಿಸಿದೆ.
ದಿಗಂತ್ ಹಾಗೂ ಬೆಂಗರೆಯ ಮುಝೈನ್ ಎಂಬ ಯುವಕರು ನಾಪತ್ತೆಯಾಗಿದ್ದರು ಆದರೆ ಮುಝೈನ್ ಪೋಷಕರು ಪೊಲೀಸರೊಂದಿಗೆ ಸೇರಿ ಅವನ ಪತ್ತೆಗೆ ಸಹಕರಿಸಿದ್ದರು. ದಿಗಂತ್ ವಿಚಾರದಲ್ಲಿ ಮಾತ್ರ ಜಿಲ್ಲೆಯನ್ನು ಪ್ರಕ್ಷುಬ್ಧಗೊಳಿಸುವ ಕಾರ್ಯಕ್ಕೆ ಸಂಘ ಪರಿವಾರದ ಹಾಗೂ ಬಿಜೆಪಿಯ ನಾಯಕರು ಇಳಿದಿದ್ದರು. ಫರಂಗಿಪೇಟೆಯಲ್ಲಿ ವ್ಯಾಪರ ವಹಿವಾಟು ಬಂದ್ ಗೊಳಿಸಿ ಮುಸ್ಲಿಮರ ವಿರುದ್ದ ಎತ್ತಿಕಟ್ಟುವಂತಹ ಪ್ರಯತ್ನಗಳನ್ನೂ ನಡೆಸಿದ್ದು ಬೆಳ್ತಂಗಡಿಯ ಬಿಜೆಪಿಯ ಶಾಸಕ ಬಹುಸಂಖ್ಯಾತ ಹಿಂದೂಗಳು ಆತಂಕದಲ್ಲಿದ್ದಾರೆ ಅವರನ್ನು ಕೆಣಕುವ ಕೆಲಸ ಮಾಡಬೇಡಿ ಎಂದು ಉದ್ರೇಕಕಾರಿ ಬಾಷಣ ಮಾಡಿದ್ದರು ಹೀಗೆ ಸಂಘಪರಿವಾರ ಈ ಪ್ರಕರಣವನ್ನು ಕೋಮುಪ್ರಚೋದನೆಗೆ ಬಳಸಲು ಪ್ರಯತ್ನ ಪಟ್ಟಿತ್ತು ಆದರೆ ಫರಂಗಿಫೇಟೆಯ ಪ್ರಜ್ಣಾವಂತ ನಾಗರಿಕರ ಸಂಯಮ ಹಾಗೂ ಸಹಕಾರದಿಂದ ಪೊಲೀಸ್ ಇಲಾಖೆಯ ಸಮಯೋಚಿತ ಪ್ರಯತ್ನದಿಂದ ಕಗ್ಗಂಟಾಗಿದ್ದ ಈ ನಾಪತ್ತೆ ಸುಖಾಂತ್ಯಗೊಂಡಿದೆ. ಈ ಪ್ರಕರಣದೊಂದಿಗೆ ಜಿಲ್ಲೆಯ ಸಾಮರಸ್ಯ ಕದಡಲು ಯತ್ನಿಸಿದ್ದು ಸಂಘ ಪರಿವಾರಕ್ಕೆ ನಿರಾಶೆಯಾಗಿದೆ ಎಂದು ಎಸ್ ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ. ಆರೋಪಿಸಿದ್ದಾರೆ.