ಮೇಲ್ತೆನೆ ವತಿಯಿಂದ 'ನೋಂಬು': ಬಾಲ್ಯತ್ತೆ ನೆನಪು ಇಫ್ತಾರ್ ಕೂಟ

ದೇರಳಕಟ್ಟೆ, ಮಾ.16 ಮೇಲ್ತೆನೆ (ಬ್ಯಾರಿ ಎಲ್ತ್‌ಕಾರ್-ಕಲಾವಿದಮಾರೊ ಕೂಟ) ದೇರಳಕಟ್ಟೆ ಇದರ ವತಿಯಿಂದ 10ನೆ ವರ್ಷದ ಇಫ್ತಾರ್ ಕೂಟವು 'ನೋಂಬು: ಬಾಲ್ಯತ್ತೆ ನೆನಪು ಎಂಬ ಕಲ್ಪನೆಯಡಿ ಕುತ್ತಾರ್-ದೇರಳಕಟ್ಟೆಯ ಜ್ಯೂಸ್ ಇಟ್ ಅಪ್ ರೆಸ್ಟೋರೆಂಟ್‌ನಲ್ಲೊ ಶನಿವಾರ ನಡೆಯಿತು.
ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಅಧ್ಯಕ್ಷ ವಿ. ಇಬ್ರಾಹೀಂ ನಡುಪದವು, ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್, ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಸಾಮಣಿಗೆ, ಉಪಾಧ್ಯಕ್ಷ ಅಶ್ರಫ್ ದೇರಳಕಟ್ಟೆ ಡಿ.ಎ., ಜೊತೆ ಕಾರ್ಯದರ್ಶಿ ಸಿದ್ದೀಕ್ ಎಸ್. ರಾಝ್, ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ಮಾಸ್ಟರ್, ಬಶೀರ್ ಅಹ್ಮದ್ ಕಿನ್ಯ, ಮುಹಮ್ಮದ್ ಬಾಷಾ ನಾಟೆಕಲ್, ಅಬ್ದುಲ್ ಬಶೀರ್ ಕಲ್ಕಟ್ಟ, ಅಶೀರುದ್ದೀನ್ ಸಾರ್ತಬೈಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ಇಬ್ರಾಹೀಂ ಮುದುಂಗಾರುಕಟ್ಟೆ, ಸಿ.ಎಂ. ಶರೀಫ್ ಪಟ್ಟೋರಿ, ಆಸೀಫ್ ಬಬ್ಬುಕಟ್ಟೆ, ಬಿ.ಎಂ. ಕಿನ್ಯ ಬಾಲ್ಯದ ಉಪವಾಸ ದಿನಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಜ್ಯೂಸ್ ಇಟ್ ಅಪ್‌ನ ಇಲ್ಯಾಸ್ ಚಾರ್ಮಾಡಿ, ಸಾಬಿತ್ ಕುಂಬ್ರ ಉಪಸ್ಥಿತರಿದ್ದರು.