ರಾಷ್ಟ್ರೀಯ ಅನುಸೂಚಿತ ಜಾತಿ ಆಯೋಗಕ್ಕೆ ಮೊಗೇರ ಸಂಘ ಮನವಿ

ಮಂಗಳೂರು, ಮಾ.17: ಪರಿಶಿಷ್ಟ ಜಾತಿಯ ಹೆಸರಿನಲ್ಲಿ ಮೀನುಗಾರ ಮೊಗೇರರು ಪಡೆದಿರುವ ಸುಳ್ಳು ಜಾತಿ ಪ್ರಮಾಣ ಪತ್ರದ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮೊಗೇರ ಸಂಘವು ರಾಷ್ಟ್ರೀಯ ಅನುಸೂಚಿತ ಜಾತಿ ಆಯೋಗದ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದೆ.
ಆಯೋಗದ ಅಧ್ಯಕ್ಷ ಕಿಶೋರ್ ಬಾಯಿ ಮಖ್ವಾನರನ್ನು ಭೇಟಿಯದ ಮೊಗೇರ ಸಂಘದ ನಿಯೋಗವು ಪರಿಶಿಷ್ಟರಲ್ಲದ ಹಿಂದುಳಿದ ವರ್ಗದ ಪಟ್ಟಿಯ ಮೀನುಗಾರ ಮೊಗೇರ ಜಾತಿಯವರು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದುಕೊಂಡು ಮೀಸಲಾತಿ ಸೌಲಭ್ಯವನ್ನು ದುರುಪಯೋಗಪಡಿಸಿದೆ ಎಂದು ಆರೋಪಿಸಿದೆ.
ಮೊಗೇರ ಸಂಘದ ಮುಖಂಡರಾದ ಸುಂದರ್ ಮೇರಾ, ಸೀತಾರಾಮ ಕೊಂಚಾಡಿ, ಅಶೋಕ್ ಕೊಂಚಾಡಿ, ತುಳಸಿದಾಸ ಪಾವಸ್ಕರ, ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿಯ ವಿವಿಧ ಸಂಘಟನೆಗಳ ಮುಖಂಡ ರಾದ ಸುಭಾಷ್ ಕಾನಡೆ, ರವೀಂದ್ರ ಮಂಗಳ, ಕಿರಣ ಶಿರೂರು, ಸಂತೋಷ ಚಂದಾವರ, ರಾಮ ಕೊಳಂಬೆ, ಸದಾನಂದ ಉಳ್ಳಾಲ್, ತಾರಾನಾಥ, ಹರೀಶ್ ಮೂಡುಬಿದಿರೆ, ಸಂದೇಶ್ ಕೋಟೆಕಾರ್, ಸುಭಾಷ್ ಕುದ್ರಿ ಪದವು, ಕೃಷ್ಣಪ್ರಸಾದ್ ನಿಯೋಗದಲ್ಲಿದ್ದರು.