ಕೊಂಕಣಿ ಕವಿ ಡಾ. ಮನೋಹರ್ ರಾಯ್ ಸರ್ದೆಸಾಯ್ ಜನ್ಮಶತಾಬ್ದಿ ಕಾರ್ಯಕ್ರಮ

ಮಂಗಳೂರು : ವೈವಿಧ್ಯ ಶೈಲಿ-ವಸ್ತುಗಳೊಂದಿಗೆ ಕೊಂಕಣಿ ಕಾವ್ಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದು ದಲ್ಲದೆ ಸರಳ ನಾಣ್ಣುಡಿ ರೂಪದ ಕವಿತೆಗಳನ್ನು ರಚಿಸಿ ಲೋಕ ಕವಿಯೆಂದೇ ಪ್ರಸಿದ್ಧಿ ಪಡೆದ ಡಾ. ಮನೋಹರ್ ರಾಯ್ ಸರ್ದೆಸಾಯ್ ಅವರ ಜನ್ಮಶತಾಬ್ದಿ ಕಾರ್ಯಕ್ರಮವು ವಿಶ್ವಕೊಂಕಣಿ ಕೇಂದ್ರದಲ್ಲಿ ಜರುಗಿತು.
ಹಿರಿಯ ಕವಿ ಮೆಲ್ವಿನ್ ರೊಡ್ರಿಗಸ್ರ ಅಧ್ಯಕ್ಷತೆ ವಹಿಸಿದ್ದರು. ವಿಚಾರಗೋಷ್ಠಿಯಲ್ಲಿ ಕವಿ ಆರ್.ಎಸ್. ಭಾಸ್ಕರ್, ಸುನಿಲ್ ಸರ್ದೆಸಾಯ್, ವಿಲ್ಫ್ರೆಡ್ ಭಾಗವಹಿಸಿದ್ದರು. ಡಾ.ಮನೋಹರ್ ರಾಯ್ರ ಆಯ್ದ ಬಾಲಗೀತೆಗಳನ್ನು ಶಾಲಾ ಮಕ್ಕಳು ಆಭಿನಯದೊಂದಿಗೆ ಹಾಡಿದರು. ಅಲ್ಲದೆ ಅಯ್ದ ಏಳು ಹಾಡುಗಳಿಗೆ ಸಂಗೀತ ವಿಧೂಷಿ ನಂದಿತಾ ಪೈ ನಿರ್ದೆಶನದೊಂದಿಗೆ ಶಾಸ್ತ್ರೀಯ ಸಂಗೀತದ ಶೈಲಿಯಲ್ಲಿ ವಿದೂಷಿ ಮೆಘಾ ಪೈ, ವಿದ್ವಾನ್ ಮುರಲೀಧರ ಶೆಣೈ ಮತ್ತಿತರ ಕಲಾವಿದರು ಹಾಡಿದರು. ಮುರಳೀಧರ ಕಾಮತ್ ಹಿಮ್ಮೇಳ ಒದಗಿಸಿದರು. ಆ ಬಳಿಕ ಗೋವಾದ ಅನಂತ್ ಅಗ್ನಿ ಸಂಗೀತ ತಂಡದಿಂದ ಮನೋಹರ ದರ್ಶನ ವೆಂಬ ಪ್ರಸ್ತುತಿ ನಡೆಯಿತು.
ಅತಿಥಿಯಾಗಿ ಭಾಗವಹಿಸಿದ್ದ ಗೋವಾ ರಾಜ್ಯಭಾಷಾ ನಿರ್ದೇಶನಾಲಯದ ಉಪನಿರ್ದೆಶಕ ಅನಿಲ್ ಸಾವಂತ್, ಅಖಿಲ ಭಾರತ ಕೊಂಕಣಿ ಪರಿಷದ್ ಅಧ್ಯಕ್ಷ ವಂ.ಮೌಝಿನೊ-ದ-ಆಟಾಯಡೆ, ಗೋವಾ ಭಾಷಾ ಮಂಡಳದ ಅಧ್ಯಕ್ಷೆ ರತ್ನಮಾಲಾ ದೀವ್ಕಾರ್ ಮಾತನಾಡಿದರು.
ಮನೋಹರ್ ರಾಯ್ರ ಸುಪುತ್ರರಾದ ಸುನಿಲ್ ಸರ್ದೆಸಾಯ್, ಉಮೇಶ ಸರ್ದೆಸಾಯ್, ಪುತ್ರಿ ಮಾಯಾ ಸರ್ದೆಸಾಯ್ ಕವಿ ಮನಸಿನ ತಂದೆಯ ಜತೆಗಿನ ಅನುಭವಗಳನ್ನು ಹಂಚಿಕೊಂಡರು. ಕೇಂದ್ರದ ಕೋಶಾಧಿ ಕಾರಿ ಬಿ.ಆರ್, ಭಟ್, ಶತಾಬ್ದಿ ಉತ್ಸವದ ಸಂಚಾಲಕ ಗೋಕುಲದಾಸ ಪ್ರಭು, ಸಿಎಒ ಡಾ. ಬಿ. ದೇವದಾಸ ಪೈ ಉಪಸ್ಥಿತರಿದ್ದರು.
ಕೇಂದ್ರದ ಉಪಾಧ್ಯಕ್ಷ ರಮೇಶ್ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ್ ಪೈ ವಂದಿಸಿದರು. ಶಿಕ್ಷಕಿ ಐಶ್ವರ್ಯಾ ಭಟ್, ವಿದ್ಯಾರ್ಥಿನಿ ದಿವಾ ಆನಂತ್ ಪೈ, ಡಾ. ವಿಜಯಲಕ್ಷ್ಮಿ, ಸುಚಿತ್ರಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.