ರಸ್ತೆ ಅಪಘಾತ: ಗಾಯಾಳು ಯುವ ವಕೀಲ ಪ್ರಥಮ್ ಬಂಗೇರ ಮೃತ್ಯು

ಪ್ರಥಮ್ ಬಂಗೇರ
ಬಂಟ್ವಾಳ : ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಕಳೆದ ವಾರ ಅಪಘಾತಕ್ಕೀಡಾಗಿದ್ದ ಬಿ.ಸಿ.ರೋಡು ಕೈಕುಂಜೆ ಬಳೀಯ ಯುವ ವಕೀಲ ಪ್ರಥಮ್ ಬಂಗೇರ (27) ಸೋಮವಾರ ಚಿಕಿತ್ಸೆಗೆ ಸ್ಪಂದಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.
ಮೃತರ ಎರಡು ಕಣ್ಣು, ಎರಡು ಕಿಡ್ನಿ, ಲಿವರ್ ಮತ್ತು ಕರುಳಿನ ಭಾಗವನ್ನು ದಾನವಾಗಿ ನೀಡಿ ಮೃತರ ತಂದೆ ಮತ್ತು ಸಹೋದರ ಮಾನವೀಯತೆಯನ್ನು ತೋರಿದ್ದಾರೆ.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದು ಬಿ.ಸಿ.ರೋಡಿನ ವಕೀಲ ಕೆ. ವೆಂಕಟ್ರಮಣ ಶೆಣೈಯವರ ಬಳಿ ವಕೀಲ ವೃತ್ತಿಯನ್ನು ಅಭ್ಯಾಸ ಮಾಡುತ್ತಿದ್ದ ಇವರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚುರುಕಾಗಿದ್ದು, ಒಳ್ಳೆಯ ನೃತ್ಯಪಟುವೂ ಆಗಿದ್ದರು.
ಕಳೆದ ನವೆಂಬರ್ ತಿಂಗಳಿನಲ್ಲಿ ಇವರ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮೃತರು ತಂದೆ ಮತ್ತು ಸಹೋದರನನ್ನು ಅಗಲಿದ್ದಾರೆ.
Next Story