ಎಂಬಿಎ ಪರೀಕ್ಷೆ: ಅನುಷಾ ಪ್ರಭುಗೆ ಪ್ರಥಮ ರ‍್ಯಾಂಕ್

ಮಂಗಳೂರು : ನಗರದ ಬೊಂದೆಲ್‌ನಲ್ಲಿರುವ ಮಣೇಲ್ ಶ್ರೀನಿವಾಸ್ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ)ನ ವಿದ್ಯಾರ್ಥಿನಿ ಎಂ.ಅನುಷಾ ಪ್ರಭು 2023-2024ನೆ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ನಗರದ ಎಂ.ರಘುವೀರ ಪ್ರಭು ಮತ್ತು ವಿಜಯಾ ಪ್ರಭು ಅವರ ಪುತ್ರಿಯಾಗಿರುವ ಅನುಷಾ ಶೈಕ್ಷಣಿಕ ಶ್ರೇಷ್ಠತೆಗಾಗಿ ವೈಶ್ಯ ಬ್ಯಾಂಕ್ ನಗದು ಬಹುಮಾನದ ಜೊತೆಗೆ 8.2ರ ಅತ್ಯಧಿಕ ಸಿಜಿಪಿಎ ಸ್ಕೋರ್ ಪಡೆದಿದ್ದಕ್ಕಾಗಿ ವಿವಿಯ ಎರಡು ಚಿನ್ನದ ಪದಕಗಳನ್ನು (ರಾಮಕೃಷ್ಣ ಮಲ್ಯ ಚಿನ್ನದ ಪದಕ ಮತ್ತು ಡಾ. ಎಚ್.ವಿ. ಶಂಕರನಾರಾಯಣ ಚಿನ್ನದ ಪದಕ) ಸಹ ಪಡೆದಿದ್ದಾರೆ.
Next Story